20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ ಮೋದಿ
Report By News Toniq | Bengaluru | Last Updated at May 12 2020

20 ಲಕ್ಷ – 2020
ದೆಹಲಿ : ಕೊರೊನಾ ಹಿನ್ನಲೆ ಇಡೀ ದೇಶದಾದ್ಯಂತ ಲಾಕ್ ಡೌನ್ ಮುಂದುವರೆದಿದ್ದು,ಸಂಕಷ್ಟದಲ್ಲಿರೋ ಬಡವರು ,ಕೂಲಿ ಕಾರ್ಮಿಕರು,ಹಗಲಿರುಳು ದುಡಿಯುವ ರೈತರು ,ಶ್ರಮಿಕರು ಸೇರಿದಂತೆ ಎಲ್ಲಾ ವರ್ಗದ ಜನರಿಗೆ 20 ಲಕ್ಷ ಕೋಟಿ ಆರ್ಥಿಕ ನೆರವನ್ನು ಕೇಂದ್ರ ಸರ್ಕಾರ ಘೋಷಿಸಿದೆ..ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ..ಇದು ಪ್ರತಿಯೊಬ್ಬ ಕೂಲಿ ಕಾರ್ಮಿಕರು ,ಬಡವರಿಗೆ,ರೈತರಿಗೆ ,ಮಧ್ಯಮ ವರ್ಗದ ಜನರಿಗೆ ಹಾಗೇ ತೆರಿಗೆ ಕಟ್ಟುವ ಎಲ್ಲರಿಗೂ ಸಹಾಯವಾಗಲಿದೆ. ಸ್ವಾವಲಂಭಿ ಭಾರತ ನಿರ್ಮಿಸಲು ಆರ್ಥಿಕ ಪ್ಯಾಕೇಜ್ ನೆರವು ನೀಡುತ್ತಿರುವುದಾಗಿ ಪ್ರಧಾನಿ ತಿಳಿಸಿದ್ದಾರೆ..ಇದರಲ್ಲಿ ಬಡವರು ಹಾಗೂ ರೈತರ ಜೇಬಿಗೆ ನೇರವಾಗಿ ಹಣ ತಲುಪಲಿದೆ.ನಾಳೆ ವಿತ್ತ ಸಚಿವೆ ಆರ್ಥಿಕ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡುತ್ತಾರೆ. ಆರ್ಥಿಕ ಪ್ಯಾಕೇಜ್ ನಿಂದ ಹೊಸ ಕ್ರಾಂತಿ ಶುರುವಾಗಲಿದೆ.ಎಲ್ಲಾ ಕ್ಷೇತ್ರದ ಅಭಿವೃದ್ಧಿಯಾಗಲಿದೆ.ಮನೆಗೆಲಸಕ್ಕೆ ಹೋಗೋ ಜನರಿಗೂ ಸಂಕಷ್ಟ ಎದುರಾಗಿದೆ.ಆತ್ಮ ವಿಶ್ವಾಸ ತುಂಬಲಿದೆ. ನಾಳೆಯಿಂದ ಸ್ಥಳೀಯವಾಗಿ ಸಿಗೋ ಅಂಗಡಿಗಳಲ್ಲಿ ಸಿಗೋ ವಸ್ತು ಖರೀದಿಸಿ,ಎಲ್ಲರಿಗೂ ಸಹಕಾರಿಯಾಗಲಿದೆ.
ಲಾಕ್ ಡೌನ್ 4.0.-ಹೊಸ ರೂಪ ಹೊಸ ನಿಯಮ
ದೇಶದಲ್ಲಿ ಲಾಕ್ ಡೌನ್ 4.0. ಹೊಸ ರೂಪ ಹೊಸ ನಿಯಮಗಳಿಂದ ಬರಲಿದೆ.ಎಲ್ಲಾ ರಾಜ್ಯಗಳಿಂದ ನಾವು ತೆಗೆದುಕೊಂಡಿರೋ ಮಾಹಿತಿ ಮೇರೆಗೆ ಈ ತಿಂಗಳ 18ನೇ ತಾರೀಖನ ಮುಂಚೆ ಲಾಕ್ ಡೌನ್ 4.0 ರ ಮಾಹಿತಿ ನೀಡಲಾಗುವುದು.ಹೊಸ ನಿಯಮಗಳು ಪಾಲನೆ ಮಾಡಿ ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡೋಣಾ..ಮುಂದೆಯು ಸಾಗೋಣಾ .ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗೋಣಾ ಅಂತ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ರು..