100 ಗಡಿದಾಟಿದ ಕೊರೊನಾ ಸೋಂಕಿತರ ಸಂಖ್ಯೆಮಹಾಮಾರಿ ಕೊರೊನಾ ತನ್ನ ಅಟ್ಟಹಾಸ ಮುಂದುವರೆಸಿದೆ..ರಾಜ್ಯದಲ್ಲಿ 100 ಗಡಿ ದಾಟಿ ಮುನ್ನುಗುತ್ತಿದೆ.ಇವತ್ತು ಕೂಡ ಹಲವರಿಗೆ ಪಾಸಿಟಿವ್ ಬಂದಿದೆ..

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 101ಕ್ಕೆ ಏರುವ ಮೂಲಕ ನೂರರ ಗಡಿ ದಾಟಿರುವುದು ಆತಂಕ ಹೆಚ್ಚಿಸಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ ತಲಾ ಒಬ್ಬರು, ಮೈಸೂರಿನಲ್ಲಿ ತಲಾ ಇಬ್ಬರು, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು, ಬೆಂಗಳೂರಿನಲ್ಲಿ ನಾಲ್ವರು, ಹೊಸಪೇಟೆಯಲ್ಲಿ ಮೂವರು ಹಾಗೂ ಕಲಬುರಗಿಯಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.

*ಸುಮ್ಮನೆ ಮಾಸ್ಕ್ ಧರಿಸಬೇಕಾಗಿಲ್ಲ

ರಾಜ್ಯದಲ್ಲಿ ಮಾಸ್ಕ್ ಗೆ ಬೇಡಿಕೆ ಹೆಚ್ಚಾಗಿದ್ದು ಯಾರು ಮಾಸ್ಕ್ ಧರಿಸಬೇಕು, ಧರಿಸಬಾರದು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

ಕೆಮ್ಮು, ಕಫ, ಜ್ವರ ಇದ್ದರೆ ಅಷ್ಟೇ ಮಾಸ್ಕ್ ಧರಿಸಿ, ಅನಾವಶ್ಯಕ ಮಾಸ್ಕ್ ಧರಿಸಬೇಕಾಗಿಲ್ಲ. ಕೊವಿಡ್-19 ಶಂಕಿತರು, ಹೆಲ್ತ್ ವರ್ಕ್​ಸ್​ ಮಾತ್ರ ಮಾಸ್ಕ್ ಧರಿಸಬೇಕು. ಎನ್-95 ಮಾಸ್ಕ್ ಅನ್ನ ಸಾಮಾನ್ಯರು ಬಳಸುವ ಅಗತ್ಯವಿಲ್ಲ. ಶಂಕಿತರು, ಸೋಂಕಿತರು ,ಚಿಕಿತ್ಸೆಗೆ ಒಳಪಡುವವರು ಮಾತ್ರ ಮಾಸ್ಕ್ ಧರಿಸಿ. ಇತರರು ಮಾಸ್ಕ್ ಧರಿಸಲೇ ಬೇಕಂದರೆ ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಿ ಎಂದು ಆಯುಕ್ತರು ಸಲಹೆ ನೀಡಿದ್ದಾರೆ.


 *24 ಗಂಟೆಗಳಲ್ಲಿ 3 ಸಾವಿರ ಕರೆಗಳು*

ಲಾಕ್ ಡೌನ್ ಇಂದ ಮನೆಯಲ್ಲೇ ಕುಳಿತು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಸಲಹಾವಾಣಿ ತೆರೆದಿರುವ ನಿಮ್ಹಾನ್ಸ್ ಸಂಸ್ಥೆಗೆ‌ ಒಂದೇ ದಿನದಲ್ಲಿ ಮೂರು ಸಾವಿರ ಕರೆಗಳು ಬಂದಿವೆ. ಭಯ, ಗೊಂದಲ, ಮಾನಸಿಕ, ಕೌಟುಂಬಿಕ ಹಾಗೂ ಆರ್ಥಿಕ‌ ಸಮಸ್ಯೆಗಳಿಗೆ ಪರಿಹಾರ ಅರಸಿ ದೇಶದ ವಿವಿಧ ಮೂಲೆಗಳಿಂದ ಕರೆಗಳು ಬಂದಿವೆ.

ಕರೆಗಳು ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಸಹಾಯವಾಣಿಯನ್ನು ವಿಸ್ತರಿಸಲಾಗುವುದು ಎಂದು  ನಿಮ್ಹಾನ್ಸ್ ಸಂಸ್ಥೆ ಕುಲಸಚಿವ ಡಾ.ಶೇಖರ್‌ ತಿಳಿಸಿದ್ದಾರೆ.

The Ancient Times

Because we’re journalists, we’re impatient. We want to gather the news as quickly as possible, using any technological resource available. And when we’re as sure of the story as we can be, we want to share it immediately, in whatever way reaches the most people. The Internet didn’t plant these ideas in our heads. We’ve always been this way.

Leave a Reply