ಐಎಎಸ್ ಪತಿ ಮೌನೀಶ್ ತಯಾರಿಸಿದ್ದ- ಕ್ವಾರಂಟೈನ್ ವಾಚ್ ಆ್ಯಪ್ ಬಗ್ಗೆ ಜನಜಾಗೃತಿ ಮೂಡಿಸಿದ ಹಿರಿಯ ಐಪಿಎಸ್ ಅಧಿಕಾರಿ ಡಿ. ರೂಪ
ಕ್ವಾರಂಟೈನ್ಗೆ ಒಳಗಾದ ವ್ಯಕ್ತಿಗಳು ಹೊರಗಡೆ ಓಡಾಟ ಮಾಡೋದು, ಜನರ ಮಧ್ಯೆ ಇರೋದನ್ನ ಕಂಡುಹಿಡಿಯಲು ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಹಾಗೂ ಅವರ ತಂಡ ಅಭಿವೃಧ್ಧಿ ಪಡಿಸಿದ ಕ್ವಾರಂಟೈನ್ ವಾಚ್ ಎಂಬ ಮೊಬೈಲ್ ಆ್ಯಪ್ನಲ್ಲಿ ಕೊವಿಡ್ 19 ಸೋಂಕಿತರ ಸ್ಥಳ ವನ್ನು ಪ್ರತಿ ಅರ್ಧ ಗಂಟೆಗೊಮ್ಮೆ ಪರಿಶೀಲಿಸಲಾಗ್ತಿದೆ.
ಪತಿ ಸಿದ್ದಪಡಿಸಿದ ಕ್ವಾರಂಟೈನ್ ವಾಚ್ ಆ್ಯಪ್ ಬಗ್ಗೆ ಜನಜಾಗೃತಿ ಮೂಡಿಸಿದ ಐಪಿಎಸ್ ರೂಪ
ಬೆಂಗಳೂರು : ಕೊರೊನಾ ಹಿನ್ನಲೆ ಹೋಮ್ ಕ್ವಾರಂಟೈನ್ಗೆ ಒಳಗಾದ ವ್ಯಕ್ತಿಗಳು ಹೊರಗಡೆ ಓಡಾಟ ಮಾಡೋದು, ಜನರ ಮಧ್ಯೆ ಇರೋದನ್ನ ಕಂಡುಹಿಡಿಯಲು ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ಹಾಗೂ ಅವರ ತಂಡ ಅಭಿವೃಧ್ಧಿ ಪಡಿಸಿದ ಕ್ವಾರಂಟೈನ್ ವಾಚ್ ಎಂಬ ಮೊಬೈಲ್ ಆ್ಯಪ್ನಲ್ಲಿ ಕೊವಿಡ್ 19 ಸೋಂಕಿತರ ಸ್ಥಳ ವನ್ನು ಪ್ರತಿ ಅರ್ಧ ಗಂಟೆಗೊಮ್ಮೆ ಪರಿಶೀಲಿಸಲಾಗ್ತಿದೆ.
ಕೊರೊನಾಕ್ಕೆ ಒಳಗಾದ ಪ್ರಾಥಮಿಕ ಹಾಗೂ ದ್ವೀತಿಯ ಜನರು ಪ್ರತಿ ಅರ್ಧ ಗಂಟೆಗೊಮ್ಮೆ ಸೆಲ್ಪಿ ತೆಗೆದು ಈ ಆ್ಯಪ್ ಮೂಲಕ ಸರಕಾರಕ್ಕೆ ಕಳುಹಿಸಬೇಕು.. ಅದು ಈ ಆ್ಯಪನಲ್ಲಿ ಅಪ್ಡೇಟ್ ಆಗಲಿದೆ. ಆ ಮೂಲಕ ಗೃಹ ದಿಗ್ಭಂದನದಲ್ಲಿರುವವರ ಚಲನ ವಲನಗಳನ್ನ ತಂತ್ರಜ್ಞಾನದ ಸಹಾಯದಿಂದ ಪತ್ತೆ ಹಚ್ಚುವ ಮಹತ್ತರ ಕೆಲಸ ಇದಾಗಿದೆ.
ಮೌನಿಶ್ ಮೌದ್ಗಿಲ್ ಕಾರ್ಯವನ್ನ ಅವರ ಪತ್ನಿ ಐಪಿಎಸ್ ಅಧಿಕಾರಿ ಡಿ ರೂಪ ಟ್ವೀಟರ್ ನಲ್ಲಿ ಹಂಚಿಕೊಂಡು ಕ್ವಾರೆಂಟ್ನಲ್ಲಿರುವವರು ರಾತ್ರಿ ನಿದ್ದೆ ಮಾಡುವ ಅವಧಿ ಹೊರತುಪಡಿಸಿ, ಪ್ರತಿ ಗಂಟೆಗೊಮ್ಮೆ ಪೋಟೊ ತೆಗೆದು ಕಳುಹಿಸುವಲ್ಲಿ ವಿಫಲರಾದರೆ ಸರ್ಕಾರದ ತಂಡ ಅವರನ್ನು ಕ್ವಾರಂಟೈನ್ ಆಸ್ಪತ್ರೆಗೆ ದಾಖಲಿಸಿದೆ.. ಕ್ವಾರಂಟೈನ್ ಕಳುಹಿಸುವ ಪ್ರತಿ ಪೋಟೊವನ್ನು ಸರ್ವೈಲೆನ್ಸ್ ತಂಡ ನೋಡಲಿದೆ ಹಾಗಾಗಿ ಎಚ್ಚರಿಕೆ ಇಂದ ಇರಿ ಎಂದಿದ್ದಾರೆ.