ಸುಧಾ ಮೂರ್ತಿ ಇನ್ಪೋಸಿಸ್ ಫೌಂಡೇಷನ್ ನಿಂದ 100 ಕೋಟಿ ಕೊರೊನಾ ಪೀಡಿತರ ನೆರವಿಗೆ
ರಾಜ್ಯದ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಗಳಲ್ಲಿ ಒಂದಾದ ಇನ್ಪೋಸಿಸ್ ಸಂಸ್ಥೆ ಹಲವು ವರ್ಷಗಳಿಂದ ಸಂತ್ರಸ್ತರಿಗೆ ಪರಿಹಾರ ನೆರವು ನೀಡುತ್ತಲೇ ಬಂದಿದೆ..ಈ ಬಾರಿ ಇನ್ಪೋಸಿಸ್ ಫೌಂಡೇಷನ್ ವತಿಯಿಂದ ಕೊರೊನಾ ಪೀಡತ ನೆರವಿಗೆ 100 ಕೋಟಿ ಹಣದ ನೆರವು ನೀಡಿದೆ..
ಬೆಂಗಳೂರು : ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹರಡುತ್ತಲೇ ಇದೆ..ಕೊರೊನಾ ಪೀಡಿತ ರೋಗಿಗಳಿಗೆ ಪ್ರತ್ಯೇಕ ಆಸ್ಪತ್ರೆ ವ್ಯವಸ್ಥೆ ಮಾಡಲು ಹೊರಟ್ಟಿದ್ದ ಸಾಫ್ಟ್ ವೇರ್ ವಿಭಾಗದಲ್ಲಿ ತನ್ನದೇ ಚಾಪು ಮೂಡಿಸಿರುವ ದೈತ್ಯ ಸಂಸ್ಥೆ ಇನ್ಪೋಸಿಸ್.. ಇಂತಹ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ ಈಗ ಮತ್ತೆ ಸಹಾಯ ಹಸ್ತ ನೀಡಿದ್ದಾರೆ.. 100 ಕೋಟಿ ನೆರವು ನೀಡುವ ಬಗ್ಗೆ ಘೋಷಿಸಿದ್ದಾರೆ..
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರೋ ಇನ್ಫೋಸಿಸ್ ಫೌಂಡೇಷನ್, ಕೊರೊನಾ ವಿರುದ್ಧ ಹೋರಾಡಲು 100 ಕೋಟಿ ಬಿಡುಗಡೆ ಮಾಡಲಾಗಿದೆ .ಇದರಲ್ಲಿ 50 ಕೋಟಿ ಪ್ರಧಾನ ಮಂತ್ರಿ ನಿಧಿಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದೆ. ಉಳಿದ ಹಣವನ್ನು ರೋಗಿಗಳ ಚಿಕಿತ್ಸೆಗೆ ಆಸ್ಪತ್ರೆಗಳ ಸಾಮರ್ಥ್ಯ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ವೆಂಟಿಲೇಟರ್, ಪರೀಕ್ಷಾ ಕಿಟ್ ಇನ್ನಿತರೆ ಪರಿಕರಗಳನ್ನು ಆರೋಗ್ಯ ರಕ್ಷಣೆ ಸಿಬ್ಬಂದಿಗೆ ನೀಡಲು ಮುಂದಾಗಿದೆ.
ಅಲ್ಲದೆ ದುರ್ಬಲ ವರ್ಗದವರಿಗೆ ಆಹಾರ ಮತ್ತು ಪೌಷ್ಠಿಕಾಂಶ ಲಭ್ಯವಾಗುವಂತೆ ಮಾಡಲು ಇದನ್ನು ಬಳಸಿಕೊಳ್ಳಲಾಗುತ್ತದೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್ಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡುವುದಾಗಿ ಘೋಷಿಸಿತ್ತು. ಹಾಗೇ ದೇಶದ ಮಿಲಿಟರಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಮತ್ತು ಪಿಪಿಇ ಸಲಕರಣೆ ನೀಡುವುದಾಗಿ ಸುಧಾ ಮೂರ್ತಿ ಒಡೆತನದ ಇನ್ಪೋಸಿಸ್ ಫೌಂಡೇಶನ್ ತಿಳಿಸಿದೆ..