ಸಿಎಂ, ಜಾರ್ಜ್, ವರ್ತೂರು ಸೇರಿ ಕೊಲೆ ಮಾಡಿಸಿದ್ದಾರೆ; ಡಿಕೆ ರವಿ ತಾಯಿ
ಬೆಂಗಳೂರು: ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ನನ್ನ ಮಗನನ್ನು ಸಿಎಂ ಸಿದ್ದರಾಮಯ್ಯ, ಸಚಿವ ಕೆಜೆ ಜಾರ್ಜ್, ವರ್ತೂರು ಪ್ರಕಾಶ್ ಹಾಗೂ ಮಾವ ಹನುಮಂತರಾಯಪ್ಪ ಸೇರಿ ಕೊಲೆ ಮಾಡಿಸಿದ್ದಾರೆ ಎಂದು ಮೃತ ಐಎಎಸ್ ಅಧಿಕಾರಿ ಡಿಕೆ ರವಿ ತಾಯಿ ಗೌರಮ್ಮ ಗಂಭೀರವಾಗಿ ಆರೋಪಿಸಿದ್ದಾರೆ.
ಶುಕ್ರವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರಿಟ್ಟ ಅವರು, ಷಡ್ಯಂತ್ರದಿಂದ ನನ್ನ ಮಗನ ಕೊಲೆ ನಡೆದಿದೆ. ನನಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದರೂ ಕೂಡಾ ನ್ಯಾಯ ಸಿಕ್ಕಿಲ್ಲ.
ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ, ಎಲ್ಲಾ ಸೇರಿ ಷಡ್ಯಂತ್ರದಿಂದ ಕೊಲೆ ಮಾಡಿಸಿದ್ದಾರೆ ಎಂದು ಕಣ್ಣೀರಿಟ್ಟರು