ಲಾಠಿ ಚಾರ್ಜ್ ಮಾಡಿ ಕೊಲೆ ಬೆದರಿಕೆ ಹಾಕಿದ್ದ ಪೊಲೀಸ್ ವಿರುದ್ಧ ಎಫ್ ಐಆರ್ ದಾಖಲು..!
ದೇಶದೆಲ್ಲೆಡೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ಜನತಾ ಕರ್ಫ್ಯೂ ಜಾರಿಯಾಗ್ತಿದ್ದ ಹಾಗೆ ಜನ ಆತಂಕಕ್ಕೆ ಒಳಗಾಗಿದ್ರು. ಅಲ್ಲದೆ ತಮ್ಮ ದೈನಂದಿನ ತುರ್ತು ಅಗತ್ಯಗಳನ್ನ ಪೂರೈಸಿಕೊಳ್ಳೋದಕ್ಕೆ ಆಗಾಗ ರಸ್ತೆಗಿಳಿಯುತ್ತಿದ್ರು. ಈ ವೇಳೆ ಪೊಲೀಸ್ರು ರಸ್ತೆಗೆ ಬಂದವರು ಯಾಕೆ ಬಂದಿದ್ದಾರೆ ಅವರ ಕಷ್ಟ ಏನು ಅನ್ನೋದನ್ನ ಅರಿಯದೆ ಹಿಗ್ಗಾಮುಗ್ಗಾ ಲಾಠಿ ಚಾರ್ಜ್ ಮಾಡಿದ್ರು.
ಹಾಸನ : ದೇಶದೆಲ್ಲೆಡೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ಜನತಾ ಕರ್ಫ್ಯೂ ಜಾರಿಯಾಗ್ತಿದ್ದ ಹಾಗೆ ಜನ ಆತಂಕಕ್ಕೆ ಒಳಗಾಗಿದ್ರು. ಅಲ್ಲದೆ ತಮ್ಮ ದೈನಂದಿನ ತುರ್ತು ಅಗತ್ಯಗಳನ್ನ ಪೂರೈಸಿಕೊಳ್ಳೋದಕ್ಕೆ ಆಗಾಗ ರಸ್ತೆಗಿಳಿಯುತ್ತಿದ್ರು. ಈ ವೇಳೆ ಪೊಲೀಸ್ರು ರಸ್ತೆಗೆ ಬಂದವರು ಯಾಕೆ ಬಂದಿದ್ದಾರೆ ಅವರ ಕಷ್ಟ ಏನು ಅನ್ನೋದನ್ನ ಅರಿಯದೆ ಹಿಗ್ಗಾಮುಗ್ಗಾ ಲಾಠಿ ಚಾರ್ಜ್ ಮಾಡಿದ್ರು. ಸಾಮಾನ್ಯ ಜನರ ಕಷ್ಟಕಾರ್ಪಣ್ಯ ಆಲಿಸಬೇಕಾದ ಪೊಲೀಸ್ರು ಮನಸೋ ಇಚ್ಛೆ ಹಲ್ಲೆ ನಡೆಸಿದ್ರು. ಹೀಗೆ ಹಾಸನದ ಅಮಿರ್ ಮೊಹಲ್ಲಾ ಬಳಿ ಶಬ್ಬಿರ್ ಅನ್ನೋರು ತಮ್ಮ ಮಗನನ್ನ ಆಸ್ಪತ್ರೆಗೆ ಕರ್ಕೊಂಡು ಹೋಗೋದಕ್ಕೆ ಪತ್ನಿಯೊಡನೆ ಬೈಕ್ ನಲ್ಲಿ ತೆರಳುತ್ತಿದ್ರು. ಈ ವೇಳೆ ಕರ್ತವ್ಯದಲ್ಲಿದ್ದ ಗಣೇಶ್ ಅನ್ನೋ ಪೊಲೀಸ್ ಪೇದೆ ಏಕಾಏಕಿ ಕಾರಣ ಕೇಳದೆ ಶಬ್ಬಿರ್ ಮೇಲೆ ಹಲ್ಲೆ ನಡೆಸಿದ್ರು,. ಅದನ್ನ ಪ್ರಶ್ನಿಸಿದ್ದಕ್ಕೆ ಮತ್ತೆ ಹಲ್ಲೆ ನಡೆಸಿದ್ರು.
ನಂತ್ರ ಪೊಲೀಸ್ ಠಾಣೆಗೆ ಕರ್ಕೊಂಡು ಹೋಗಿ ಅಲ್ಲೂ ಹಲ್ಲೆ ನಡೆಸಿದ್ರು. ನಂತ್ರ ಆಸ್ಪತ್ರೆಗೆ ಪೊಲೀಸರೇ ಕರ್ಕೊಂಡು ಹೋಗಿ ಬೈಕ್ ನಲ್ಲಿ ಬಿದ್ದಿದ್ದಾರೆ ಅಂತ ಟ್ರೀಟ್ ಮೆಂಟ್ ಕೊಡಿಸಿದ್ರು. ನಂತ್ರ ಸಂಜೆ ಅವರನ್ನ ಮನೆಗೆ ಬಿಟ್ಟು ಹಲ್ಲೆ ಮಾಡಿರೋ ವಿಚಾರ ಬಾಯಿಬಿಟ್ರೆ ಸುಳ್ಳು ಕೇಸ್ ಹಾಕೋದಲ್ಲದೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ರಂತೆ. ನಂತ್ರ ಶಬ್ಬಿರ್ ಪತ್ನಿ ಹಾಸನದ ರೇಷ್ಮಾ ಪೆನ್ ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಗಣೇಶ್ ವಿರುದ್ಧ ದೂರು ನೀಡಿದ್ದಾರೆ. ಇದೀಗ ಪೊಲೀಸ್ರು ಎಫ್ ಐಆರ್ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
