ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಇಡೀ ದೇಶದಲ್ಲೇ ಲಾಕ್ ಡೌನ್ ಘೋಷಿಸಿರುವ ನಡುವೆಯೂ ಗಣಿಗಾರಿಕೆಯಲ್ಲಿ ಕದ್ದು ಮುಚ್ಚಿ ಕಾರ್ಯಚಟುವಟಿಕೆ ನಡೆಸುತ್ತಿರುವ ಗಣಿ ಮಾಲೀಕರು.
Report By Bora Nayak | Mandya District | Last Updated at April 11 2020
ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಇಡೀ ದೇಶದಲ್ಲೇ ಲಾಕ್ ಡೌನ್ ಘೋಷಿಸಿರುವ ನಡುವೆಯೂ ಗಣಿಗಾರಿಕೆಯಲ್ಲಿ ಕದ್ದು ಮುಚ್ಚಿ ಕಾರ್ಯಚಟುವಟಿಕೆ ನಡೆಸುತ್ತಿರುವ ಗಣಿ ಮಾಲೀಕರು.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆಯ ಶಂಭೂನಹಳ್ಳಿ ಗ್ರಾಮದ ಶ್ರೀ ಭೈರವೇಶ್ವರ ಸ್ಟೋನ್ ಕ್ರಷರ್ ನಲ್ಲಿ ಕಾರ್ಯಚಟುವಟಿಕೆ.
ಎಂ.ಆನಂದ್ ಎಂಬುವರಿಗೆ ಸೇರಿದ ಸ್ಟೋನಗ ಕ್ರಷರ್ ನಲ್ಲಿ ಎಗ್ಗಿಲ್ಲದೇ ನಡೆದಿದೆ ಜಲ್ಲಿ ಕಲ್ಲು ಸಾಗಾಣಿಕೆ.
ಸ್ಟೋನ್ ಕ್ರಷರ್ ನಲ್ಲಿ ಕೆಲಸ ಮಾಡುತ್ತಿರುವವರು ಲಾಕ್ ಡೌನ್ ನಡುವೆಯೂ ಸರ್ಕಾರದ ನಿಯಮ ಉಲ್ಲಂಘಿಸಿ ಮಾಸ್ಕ್ ಧರಿಸದೆ ಬೆಳಗಾವಿ ಜಿಲ್ಲೆಯ ಕೂಲಿ ಕಾರ್ಮಿಕರು ಜಲ್ಲಿ ಲೋಡ್ ತುಂಬುತ್ತಿರುವುದು.
ನಮಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ, ಕಾರ್ಡ್ ಇರುವವರಿಗೆ ಮಾತ್ರ ಅಕ್ಕಿ ಸಿಗುತ್ತಿದ್ದು, ಕಾರ್ಡ್ ಇಲ್ಲ ಅನೇಕ ಮಂದಿಗೆ ಯಾವ ಅಕ್ಕಿನೂ ಸಿಕ್ತಿಲ್ಲ ರೀ ಎಂದು ಅವಲತ್ತುಕೊಳ್ಳುತ್ತಿರುವ ಕೂಲಿ ಕಾರ್ಮಿಕರು.
ಸುಮಾರು 60ಕ್ಕೂ ಹೆಚ್ಚು ಮಂದಿ ಸ್ಟೋನ್ ಕ್ರಷರ್ ನಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು
ಕೊರೊನಾ ಭೀತಿ ಮಧ್ಯೆಯೂ ಸ್ಟೋನ್ ಕ್ರಷರ್ ನಲ್ಲಿ ಜಲ್ಲಿ ಕಲ್ಲು ಸಾಕಾಣಿಕೆ ಸೇರಿದಂತೆ ಇತರೆ ಚಟುವಟಿಕೆಗಳು ನಡೆಯುತ್ತಿದ್ದರೂ ಗಣಿ ಮಾಲೀಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ತಾಲೂಕು ಆಡಳಿತ.