ಮನೆಗೆ ನುಗ್ಗಿ ಬುಲೆಟ್ ಪ್ರಕಾಶ್ ಗೆ ಹೊಡೆದಿದ್ದ ಶಿವರಾಜ್ ಕುಮಾರ್ ಅಭಿಮಾನಿಗಳು.
ಮನೆಗೆ ನುಗ್ಗಿ ಬುಲೆಟ್ ಪ್ರಕಾಶ್ ಗೆ ಹೊಡೆದಿದ್ದ ಶಿವರಾಜ್ ಕುಮಾರ್ ಅಭಿಮಾನಿಗಳು .
ಅದು 1999ರ ಇಸವಿ. ಆಗ ಶಿವರಾಜ್ ಕುಮಾರ್ ಅಭಿನಯದ ಎಕೆ 47 ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾದಲ್ಲಿ ಬುಲೆಟ್ ಪ್ರಕಾಶ್ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ರು. ಅದು ಅವರ ಮೊದಲ ಸಿನಿಮಾವಾಗಿತ್ತು.
ಬುಲೆಟ್ ಗೆ ಆ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರಿಗೆ ಕೆಟ್ಟದಾಗಿ ಬೈಯ್ಯುವ ಒಂದು ಡೈಲಾಗ್ ಇತ್ತು. ಸಿನಿಮಾ ರಿಲೀಸ್ ಆಗ್ತಿದ್ದ ಹಾಗೆ ಎಲ್ಲರು ಥಿಯೇಟರ್ ನಲ್ಲಿ ಸಿನಿಮಾ ನೋಡಿದ್ರು. ಆಗ ಸಿನಿಮಾ ಮುಗಿತಾ ಇದ್ದ ಹಾಗೆ ಶಿವಣ್ಣನ ಅಭಿಮಾನಿಗಳು ಕಲಾಸಿಪಾಳ್ಯದ ಬುಲೆಟ್ ಪ್ರಕಾಶ್ ಮನೆಗೆ ನುಗ್ಗಿದ್ರು.
ಶಿವಣ್ಣನಿಗೆ ಕೆಟ್ಟದಾಗಿ ಬೈಯುತ್ತಿಯಾ ಅಂತ ಹೇಳಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ರು,. ಅಲ್ಲದೆ ಅಲ್ಲಿ ತಳ್ಳಾಟ ನೂಕಾಟ ಕೂಡಾ ನಡೆದಿತ್ತು. ಈ ವಿಷಯ ತಿಳಿತಾ ಇದ್ದ ಹಾಗೆ ಶಿವಣ್ಣ ಮಧ್ಯೆ ಪ್ರವೇಶಿಸಿ ತಮ್ಮ ಅಭಿಮಾನಿಗಳಿಗೆ ಬೈದಿದ್ರು. ಅದು ಸಿನಿಮಾ ಅವರು ಡೈಲಾಗ್ ಅನ್ನ ಹೇಳಿದ್ದಾರೆ ಅಂತಷ್ಟೇ ಹೇಳಿ ಸಮಾಧಾನ ಮಾಡಿದ್ರು.
ಅದಾದ ಬಳಿಕ ಶಿವಣ್ಣ ಬುಲೆಟ್ ರನ್ನ ಪರಿಚಯಮಾಡಿಕೊಂಡು ಅವರಿಗೆ ಹಣ ನೀಡಿ ತಮ್ಮ ಕೆಲಸ ಮುಂದುವರೆಸಲು ಹೇಳಿದ್ರು. ಈ ಬಗ್ಗೆ ಬುಲೆಟ್ ಪ್ರಕಾಶ್ ಇಂಟರ್ ವ್ಯೂ ಒಂದರಲ್ಲಿ ಹೇಳಿಕೊಂಡಿದ್ರು.
ಮೂರು ತಲೆಮಾರುಗಳ ಜೊತೆ ನಟಿಸಿದ್ದ ಬುಲೆಟ್ ಪ್ರಕಾಶ್
ಮುನ್ನೂರ ಇಪ್ಪತ್ತುಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಬುಲೆಟ್ ಪ್ರಕಾಶ್ ದಾಖಲೆಯೊಂದನ್ನ ಮಾಡಿದ್ದಾರೆ. ರಾಜ್ ಕುಮಾರ್ ಅವರ ಕುಟುಂಬದ ಮೂರು ತಲೆಮಾರುಗಳ ಜೊತೆ ಸಿನಿಮಾ ಮಾಡಿದ್ದ ಹೆಗ್ಗಳಿಕೆ ಬುಲೆಟ್ ಅವರದ್ದು.
ರಾಜ್ ಕುಮಾರ್ ಅವರ ಜೊತೆ ಕೂಡಾ ಬುಲೆಟ್ ಸ್ಕ್ರೀನ್ ಶೇರ್ ಮಾಡಿದ್ರು. ಆದಾದ ನಂತ್ರ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘಣ್ಣನ ಮಗ ವಿನಯ್ ರಾಜ್ ಕುಮಾರ್ ಅವರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ರು. ಸಿನಿಮಾದಲ್ಲಿ ಇಂತಹದ್ದೊಂದು ದಾಖಲೆ ಬುಲೆಟ್ ರನ್ನ ಬಿಟ್ರೆ ಮತ್ಯಾರು ಮಾಡಿಲ್ಲ ಅಂತ ಅನಿಸುತ್ತೆ.
ಶತೃಗಳೇ ನನಗೆ ಗೂಗಲ್ ಮ್ಯಾಪ್
ಬುಲೆಟ್ ಪ್ರಕಾಶ್ ಅನಾರೋಗ್ಯದಿಂದ ಹಿಂದೆ 108 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಗೆದ್ದು ಬಂದಿದ್ರು,. ಆ ವೇಳೆ ಅವ್ರು ಆರ್ಥಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ರು. ಅಲ್ಲದೆ ಅವರಿಗೆ ಸಾಕಷ್ಟು ಆಫರ್ ಗಳು ಕೂಡಾ ಇರಲಿಲ್ಲ. ಆ ಸಂದರ್ಭದಲ್ಲಿ ಅವರಿಗೆ ಸಾಕಷ್ಟು ಜನ ಕಿರುಕುಳವನ್ನ ನೀಡಿದ್ರು.
ಈ ಬಗ್ಗೆ ಮಾತನಾಡ್ತಾ ನಾನು ಯಾರಿಗೂ ಹೆದರೋದಿಲ್ಲ. ನಮ್ಮ ಅಪ್ಪ ನನಗೆ ಗಂಡಸು ಅಂತ ನನ್ನನ್ನ ಹುಟ್ಟಿಸಿದ್ದಾರೆ. ನಾನು ಯಾವತ್ತಿಗೂ ಬೀದಿಗೆ ಬೀಳೋದಿಲ್ಲ. ನನ್ನ ಜೊತೆಗೆ ಇದ್ದವರೆ ನನಗೆ ಮೋಸ ಮಾಡಿದ್ರು.
ಅಲ್ಲದೆ ಜೀವನದಲ್ಲಿ ಶತೃಗಳು ಇರಬೇಕು ಆ ಶತೃಗಳು ಇದ್ದರೆ ಮಾತ್ರ ಮುಂದೆ ಬರೋದಕ್ಕೆ ಸಾಧ್ಯ ಅಂತ ಹೇಳಿಕೊಂಡಿದ್ರು. ಅಲ್ಲದೆ ಶತೃಗಳೇ ನನಗೆ ಗೂಗಲ್ ಮ್ಯಾಪ್ ಎಂದು ಹೇಳಿದ್ರು.