ಮತ್ತೆ ನೆನಪಿಸುತ್ತಿದೆ ಬಾಲಿವುಡ್ ಚೆಲುವೆಯ ಸಾವಿನ ರಹಸ್ಯ

Report By News Toniq | Bengaluru | Last Updated at April 6 2020

ಮುಂಬೈ: ಕೆಲವು ಘಟನೆಗಳು ಹಾಗೆ ಬೇಡವೆಂದರು ಹಾಗೆ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತೆ. ನಡೆದು ಹೋದ ಘಟನೆಗಳು ಸತ್ಯವೋ ಸುಳ್ಳೋ ಅನ್ನೋದು ಕೂಡಾ ಕಾಡುತ್ತಲೇ ಇರುತ್ತೆ. ಇಂತಹ ಹೊತ್ತಿನಲ್ಲಿ ನೆನಪಾಗೋದು ಬಾಲಿವುಡ್ ಹಾಗೂ ಕಾಲಿವುಡ್ ಸ್ಟಾರ್ ನಟಿ ದಿವ್ಯಾ ಭಾರತಿ.
ದಿವ್ಯಾ ಭಾರತಿ 80ರದಶದಕದ ಕೊನೆಯ ಮತ್ತು 90ರ ದಶಕದ ಆರಂಭದಲ್ಲಿ ಭರ್ಜರಿ ಫೇಮ್ ನಲ್ಲಿದ್ದ ನಟಿ. ಬಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಎಲ್ಲಿ ಕೇಳಿದ್ರು ಇವಳದ್ದೇ ಸುದ್ದಿ. ಕೇವಲ 19ನೇ ವಯಸ್ಸಿಗೆ ಆಕೆಗೆ ಅಪಾರವಾದ ಯಶಸ್ಸು, ಜನ ಮನ್ನಣೆ, ಹಣ ಎಲ್ಲವನ್ನ ತಂದುಕೊಟ್ಟಿತ್ತು. ಅದೇ ಜನಪ್ರಿಯತೆಯ ಜೊತೆಗೆ ಸಾವನ್ನ ಕೂಡಾ ತಂದಿತ್ತು. 
ಈಕೆ ಇನ್ನು ಬಾಲಿವುಡ್ ಅನ್ನ ಅಕ್ಷರಶಃ ಆಳುವ ನಟಿ ಅಂತಾನೇ ಅವತ್ತಿನ ಸಿನಿಮಾ ಪಂಡಿತರು ಷರಾ ಬರೆದು ಬಿಟ್ಟಿದ್ರು. ಅವಳ ಬಬ್ಲಿ ಬಾಡಿ, ನಕ್ಷತ್ರಗಳಂತೆ ಹೊಳೆಯುತ್ತಿದ್ದ ಕಣ್ಣು ಮುಂದಿನ ಸುವರ್ಣ ದಿನದ ಕಥೆ ಹೇಳ್ತಿತ್ತು. ಆದ್ರೆ ಇಡೀ ಭಾರತೀಯ ಚಿತ್ರರಂಗವೇ ಶಾಕ್ ಗೆ ಒಳಗಾಗುವ ಒಂದು ಸುದ್ದಿ ಏಪ್ರಿಲ್ 6 1993ರಂದು ಬಂದಿತ್ತು.

ಅವತ್ತಿಗೆ ಎಷ್ಟೋ ಜನರ ಆರಾಧ್ಯ ಧೈವವಾಗಿದ್ದ ಹಾಲುಗೆನ್ನೆಯ ಸುಂದರಿ ತನ್ನ ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಬಿದ್ದು ಸತ್ತಿದ್ದಾಳೆ ಅನ್ನೋ ಸುದ್ದಿಯದು. ಅದನ್ನ ನಂಬಬೇಕಾ ಬಿಡಬೇಕೋ ಅನ್ನೋದು ಯಾರಿಗೂ ಗೊತ್ತೇ ಆಗಲಿಲ್ಲ. ಅವತ್ತು ಆಕೆಯ ಜೊತೆಯಲ್ಲಿದ್ದ ಸ್ನೇಹಿತ ಆಕೆಯನ್ನ ಆಸ್ಪತ್ರೆಗೆ ಕರ್ಕೊಂಡು ಹೋದ್ರು ಆಸ್ಪತ್ರೆಗೆ ಕಾಲಿಡ್ತಿದ್ದ ಹಾಗೆ ಅವಳ ಜೀವ ಹೊರಟು ಹೋಗಿತ್ತು.
ಆಕೆ ವೈದ್ಯರಲ್ಲಿ ಅಸಹನೀಯ ನೋವಿನ ಪರಿಸ್ಥಿತಿಯಲ್ಲೂ ನನ್ನನ್ನ ಉಳಿಸಿಕೊಳ್ಳಿ ಅಂತ ದಯನೀಯವಾಗಿ ಕೇಳಿಕೊಂಡಿದ್ಲು. ಸಾಯುವ ಮುನ್ನ ಅವಳ ಕಣ್ಣಲ್ಲಿ ನಾನು ಬದುಕಬೇಕು ಅನ್ನೋ ಆಸೆ ಹಾಗೆ ಉಳಿದು ಬಿಟ್ಟಿತ್ತು. ದಿವ್ಯಾ ಭಾರತಿ ಸತ್ತು ಅದಾಗ್ಲೇ 27 ವಸಂತಗಳು ಕಳೆದು ಹೋಗಿವೆ. ಆದ್ರೆ ಆಕೆಯ ಸಾವಿನ ಹಿಂದಿನ ರಹಸ್ಯ ಮಾತ್ರ ಇನ್ನು ಹಾಗೆಯೇ ಉಳಿದುಕೊಂಡಿದೆ. ಆಕೆಯನ್ನ ಗುಂಡಿಟ್ಟು ಕೊಲ್ಲಲಾಯ್ತು. ಅಥವಾ ಬಾಲ್ಕನಿಯಿಂದ ತಳ್ಳಲಾಯ್ತ ಅನ್ನೋದು ಇನ್ನು ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ. 
ಪೊಲೀಸ್ ರೆಕಾರ್ಡ್ ಪ್ರಕಾರ ಅದೊಂದು ಆಕಸ್ಮಿಕ ಸಾವು. ಆದ್ರೆ ಮುಂಬೈನ ಭೂಗತ ಲೋಕದ ಪರಿಚಯ ಇರೋರು ಇದೊಂದು ಭೂಗತ ಲೋಕದ ಕುಸುರಿ ಕೆಲಸ ಅಂತ ಹೇಳ್ತಾರೆ. ಆಕೆಯ ತಂದೆಗೂ ಮಗಳ ಸಾವನ್ನ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಅವತ್ತು ಆಕೆ ಕುಡಿದಿದ್ಲು. ಆದ್ರೆ ಅರ್ಧ ಗಂಟೆಯಲ್ಲಿ ಎಷ್ಟು ಕುಡಿಯೋದಕ್ಕೆ ಸಾಧ್ಯ ಅಂತ ಪ್ರಶ್ನೆ ಮಾಡ್ತಾರೆ. ಆಕೆ ಯಾವುದೇ ಖಿನ್ನತೆಯಿಂದಲೂ ಬಳಲ್ತಿರಲಿಲ್ಲ. ಆಕೆಯೇ ಬೇರೆಯವರಿಗೆ ಖಿನ್ನತೆ ಬರೋ ಹಾಗೆ ಇದ್ದಳು ಅಂತ ಹೇಳ್ತಾರೆ. 
ಆಕೆಯ ಸಾವು ಹೇಗಾಯ್ತು ಯಾಕಾಯ್ತು ಅನ್ನೋದು ಎಂದಿಗೂ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿಯುತ್ತೆ. ಕೇವಲ 19ನೇ ವಯಸ್ಸಿಗೆ ಆಕೆ ಸಂಪಾದಿಸಿದ್ದ ಯಶಸ್ಸು ಇವತ್ತಿಗೂ ಅವಳನ್ನ ನೆನಪಿಸುತ್ತೆ. ಯಶಸ್ಸು ಎಷ್ಟು ಬೇಗ ಬರುತ್ತೋ ಅಷ್ಟೇ ಬೇಗ ಮಾಯವಾಗುತ್ತೆ ಅನ್ನೋದಕ್ಕೆ ದಿವ್ಯಾ ಭಾರತಿ ಉದಾಹರಣೆ ಅಂತ ಬಾಲಿವುಡ್ ಗೆ ಕಾಲಿಡೋ ಹಿರೋಯಿನ್ ಗಳಿಗೆ ಜನ ಆಗಾಗ ನೆನಪಿಸುತ್ತಾ ಇರ್ತಾರೆ.

The Ancient Times

Because we’re journalists, we’re impatient. We want to gather the news as quickly as possible, using any technological resource available. And when we’re as sure of the story as we can be, we want to share it immediately, in whatever way reaches the most people. The Internet didn’t plant these ideas in our heads. We’ve always been this way.

Leave a Reply