ಮತ್ತಷ್ಟು ಹೆಚ್ಚಾಯ್ತು ವೇತನ ಕಡಿತಕ್ಕೆ ಪೊಲೀಸರ ಅಸಮಧಾನ..!ಕೊರೋನಾ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರಿ ನೌಕರರ ಒಂದು ದಿನದ ವೇತನ ಕಟಾವಣೆಗೆ ಪೊಲೀಸ್ರಿಂದ ಭಾರಿ ಅಸಮಧಾನ ವ್ಯಕ್ತವಾಗಿದೆ.
ಬೆಂಗಳೂರು: ಕೊರೋನಾ ಸಂಕಷ್ಟಕ್ಕೆ ಪರಿಹಾರವಾಗಿ ಸರ್ಕಾರಿ ನೌಕರರ ಒಂದು ದಿನದ ವೇತನ ಕಟಾವಣೆಗೆ ಪೊಲೀಸ್ರಿಂದ ಭಾರಿ ಅಸಮಧಾನ ವ್ಯಕ್ತವಾಗಿದೆ. ಮೊದಲು ಹರಿಹರ ಪೊಲೀಸ್ರು ತಮ್ಮ ಆಕ್ಷೇಪಣೆಯನ್ನ ಸಲ್ಲಿಸಿದ್ರು.
ಇದೀಗ ಬೆಂಗಳೂರು ಪೊಲೀಸ್ರು ತಮ್ಮ ಅಸಮಧಾನವನ್ನ ಹೊರ ಹಾಕಿದ್ದಾರೆ. ಅದ್ರಲ್ಲೂ ಪ್ರಮುಖವಾಗಿ ಔರಾದ್ಕರ್ ವರದಿಯ ಅಂಶಗಳನ್ನ ಜಾರಿಗೆ ತರುವಲ್ಲಿ ಯಾವೊಬ್ಬ ಜನಪ್ರತಿನಿಧಿಯು ಆಸಕ್ತಿವಹಿಸಿಲ್ಲ. ಹೀಗಾಗಿ ಆ ವರದಿ ಹಾಗೆ



ಉಳಿದಿದೆ. ಈಗ ಕಷ್ಟ ಅಂದಾಗ ನೌಕರರ ಸಂಬಳ ಕಡಿತ ಸರಿಯಲ್ಲ ಅನ್ನೋದನ್ನ ಪತ್ರದಲ್ಲಿ ತಿಳಿಸಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಜನ ಪೊಲೀಸರು ಸಹಿ ಮಾಡಿ ಆಕ್ಷೇಪಣೆಯನ್ನ ಸಲ್ಲಿಸಿದ್ದಾರೆ.
ಪೊಲೀಸರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ತ್ವರಿತ ಕ್ರಮಕೈಗೊಳ್ಳದೆ ವೇತನ ಕಡಿತ ಮಾಡೋದು ಸರಿಯಲ್ಲ. ಅಲ್ಲದೆ ಪೊಲೀಸ್ರು ಈಗಾಗ್ಲೇ ಕರೋನ ವಿರುದ್ಧದ ಹೋರಾಟದಲ್ಲಿ ತಮ್ಮನ್ನ ಹೆಚ್ಚಾಗಿ ತೊಡಗಿಸಿಕೊಂಡಿದ್ದು ಜೀವ ಭಯ ಬಿಟ್ಟು ಕೆಲಸ ಮಾಡ್ತಿದ್ದಾರೆ ಅನ್ನೋ ಅಂಶವನ್ನ ತಿಳಿಸಿದ್ದಾರೆ.