ಮಂಡ್ಯ ಬ್ರೇಕಿಂಗ್ಕೊರೊನಾ ಭೀತಿಯಲ್ಲಿ ಪೌರ ಕಾರ್ಮಿಕರು.
ಬೋರ ನಾಯಕ ಅವರಿಂದ ವರದಿ | ಮಂಡ್ಯ ಜಿಲ್ಲೆ | ಕೊನೆಯದಾಗಿ ಏಪ್ರಿಲ್ 27 2020 ರಂದು ನವೀಕರಿಸಲಾಗಿದೆ
ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಪುರಸಭೆಯ ಪೌರ ಕಾರ್ಮಿಕರ ಸ್ಥಿತಿಯನ್ನು ನೋಡಿದರೆ ಇವರಿಗೆ ಬಹುಬೇಗನೇ ಮಹಾಮಾತಿ ಕೊರೊನಾ ವೈರಾಣು ಹರಡಬಹುದು ಎಂಬ ಭೀತಿ ಎದುರಾಗಿದೆ.
ಪಾಂಡವಪುರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಯಾವುದೇ ರಕ್ಷಣೆ ಇಲ್ಲದೆ ತಮ್ಮ ನಿತ್ಯದ ಕೆಲಸದಲ್ಲಿ ತೊಡಗಿರುವ ಪೌರ ಕಾರ್ಮಿಕರು.
ಕೈಯಲ್ಲಿ ಗ್ಲೌಸ್ ಇಲ್ಲದೇ, ಕಾಲಿಗೆ ಶೂ ಇಲ್ಲದೇ ಪೌರಕಾರ್ಮಿಕರು ಕೆಲಸದಲ್ಲಿ ನಿರತರಾಗಿರುವ ದೃಶ್ಯ ಪಾಂಡವಪುರದಲ್ಲಿ ಸರ್ವೇ ಸಾಮಾನ್ಯವಾಗಿದೆ.
ಯಾವುದೇ ರಕ್ಷಣೆ ಇಲ್ಲದೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಮಾಧ್ಯಮದವರು ಪ್ರಶ್ನೆ ಮಾಡಿದರೆ ಪುರಸಭೆಯಿಂದ ಕೊಟ್ಟಿರೊ ಗ್ಲೌಸ್ ವಾರದಲ್ಲೇ ಹರಿದುಹೋಗಿದೆ ಸರ್, ನಂತರ ಇನ್ನೂ ಹೊಸ ಗ್ಲೌಸ್ ಕೊಟ್ಟಿಲ್ಲ. ನಾವೇನು ಮಾಡೋದು ಎಂದು ಸಹಾಯಕತೆ ವ್ಯಕ್ತಪಡಿಸುತ್ತಾರೆ.