ಮಂಡ್ಯ ಜಿಲ್ಲೆ ಮುರುಕನಹಳ್ಳಿ ಗ್ರಾಮದ ಉಧ್ಯಮಿ ಎಳನೀರು ವ್ಯಾಪಾರಿ ಯತೀಶಗೌಡ ಅವರ ಪುತ್ರಿ ನಿರೀಕ್ಷಾ ವೈ.ಗೌಡ ಅವರ 5ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ದುಂಡಶೆಟ್ಟಿಲಕ್ಷ್ಮಮ್ಮ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯ ರೋಗಿಗಳು, ಸಿಬ್ಬಂಧಿಗಳು ಹಾಗೂ ವೈದ್ಯರಿಗೆ ಬೆಳಗಿನ ಉಪಹಾರವನ್ನು ವಿತರಿಸಲಾಯಿತು
ಬೋರ ನಾಯಕ ಅವರಿಂದ ವರದಿ | ಮಂಡ್ಯ ಜಿಲ್ಲೆ | ಕೊನೆಯದಾಗಿ ಏಪ್ರಿಲ್ 27 2020 ರಂದು ನವೀಕರಿಸಲಾಗಿದೆ
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಜಿ.ಸಿ.ಶಿವಪ್ಪ ಸಿಬ್ಬಂಧಿಗಳಿಗೆ ಹಾಗೂ ರೋಗಿಗಳಿಗೆ ಉಪಹಾರದ ಪೊಟ್ಟಣಗಳು ಹಾಗೂ ಕೇಕನ್ನು ವಿತರಿಸಿದರು.
ಕೊರೋನಾ ಸಂಕಷ್ಠದ ಸಮಯದಲ್ಲಿ ಮಗಳ ಹುಟ್ಟು ಹಬ್ಬಕ್ಕಾಗಿ ದುಂದು ವೆಚ್ಚ ಮಾಡದೇ ಸರಳವಾಗಿ ಕೇಕ್ ಕತ್ತರಿಸಿ ಸಂಕಷ್ಠದಲ್ಲಿರುವ ಬಡಜನರು, ರೋಗಿಗಳು ಹಾಗೂ ಕೊರೋನಾ ವಾರಿಯರ್ಸ್ ಗೆ ಆಹಾರ ಪಟ್ಟಣಗಳನ್ನು ವಿತರಿಸಿ ಹೃದಯಶ್ರೀಮಂತಿಕೆ ಪ್ರದರ್ಶಿಸಿದ ಉದ್ಯಮಿ ಯತೀಶ್ ಗೌಡರನ್ನು ವೈದ್ಯಾಧಿಕಾರಿ ಸತೀಶ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ಸತೀಶ್ ವೀರಶೈವ, ಪ್ರಶಾಂತ್, ಶಿಕ್ಷಕ ಸಿಂದಘಟ್ಟ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.