ಮಂಡ್ಯ ಜಿಲ್ಲೆ ಕಾಪನಹಳ್ಳಿಯ ಇತಿಹಾಸ ಪ್ರಸಿದ್ಧ
ಮಂಡ್ಯ ಜಿಲ್ಲೆ ಕಾಪನಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀಸ್ವತಂತ್ರಸಿದ್ದಲಿಂಗೇಶ್ವರಸ್ವಾಮಿದೇವಸ್ಥಾನದಲ್ಲಿ (ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮನೆ ದೇವರು ) ಇಂದು ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ದೇವಸ್ಥಾನದ ಎಲ್ಲ ವಿದ್ಯುತ್ ದೀಪಗಳನ್ನು ಆರಿಸಿ .ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಯವರ ಗದ್ದುಗೆ ಹಾಗೂ ದೇವಸ್ಥಾನದ ಸುತ್ತಲೂ ಮಣ್ಣಿನ ಹಣತೆಗಳನ್ನು ಹಚ್ಚಿ ವಿಶೇಷ ಪೂಜೆ ನೆರವೇರಿಸಲಾಯಿತು .ಶ್ರೀಮಠದ ಗುರುಗಳಾದ ಸ್ವತಂತ್ರ ಚನ್ನವೀರ ಮಹಾಸ್ವಾಮಿಗಳು ರಾಜ್ಯ ಹಾಗೂ ದೇಶಕ್ಕೆ ಒಳಿತನ್ನು ಬಯಸಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಓಗೊಟ್ಟು ..ವಿಶೇಷ ಮಣ್ಣಿನ ಹಣತೆ ದೀಪಗಳ ಮಹಾಪೂಜೆ ನಡೆಯಿತು