ಮಂಡ್ಯದ ನೂತನ ಉಸ್ತುವಾರಿ ಸಚಿವರಾಗಿ ಡಾ ಕೆ ಸಿ ನಾರಾಯಣ ಗೌಡ ನೇಮಕ
Report By Bora Nayak | Mandya District | Last Updated at April 10 2020
ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್ : ಇಲ್ಲಿದೆ ಪಟ್ಟಿ
ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂಪುಟ ವಿಸ್ತರಣೆ ನಂತರ, ಕೊರೊನಾ ವೈರಸ್ ನಿಯಂತ್ರಣಕ್ಕಾಗಿ, ಇದೀಗ ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನು ಹಂಚಿಕೆ ಮಾಡಿದೆ. ಅಲ್ಲದೇ ಈಗಾಗಲೇ ನೀಡಲಾಗಿದ್ದಂತ ಅನೇಕ ಸಚಿವ ಜಿಲ್ಲಾ ಉಸ್ತುವಾರಿ ಸ್ಥಾನದಲ್ಲಿ ಬದಲಾವಣೆ ಮಾಡಲಾಗಿದೆ.
ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 30 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಈ ಮೊದಲು ಸಚಿವರಿಗೆ ನೀಡಲಾಗಿದ್ದಂತ ಉಸ್ತುವಾರಿ ಹೊಣೆ ಕೂಡ ಬದಲಾವಣೆ ಮಾಡಲಾಗಿದೆ.
ಹೀಗೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ
ಬೆಂಗಳೂರು ನಗರ – ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ರಾಮನಗರ – ಡಿಸಿಎಂ ಡಾ.ಸಿಎಸ್ ಅಶ್ವಥ್ ನಾರಾಯಣ
ರಾಯಚೂರು – ಡಿಸಿಎಂ ಲಕ್ಷ್ಮಣ್ ಸವದಿ
ಬಾಗಲಕೋಟೆ ಮತ್ತು ಕಲಬುರ್ಗಿ – ಡಿಸಿಎಂ ಗೋವಿಂದ ಎಂ ಕಾರಜೋಳ
ಶಿವಮೊಗ್ಗ – ಸಚಿವ ಕೆ ಎಸ್ ಈಶ್ವರಪ್ಪ
ಬೆಂಗಳೂರು ಗ್ರಾಮಾಂತರ – ಸಚಿವ ಆರ್ ಅಶೋಕ್
ಬೆಳಗಾವಿ ಮತ್ತು ಧಾರವಾಡ- ಸಚಿವ ಜಗದೀಶ್ ಶೆಟ್ಟರ್
ಚಿತ್ರದುರ್ಗ – ಸಚಿವ ಬಿ ಶ್ರೀರಾಮುಲು
ಚಾಮರಾಜನಗರ – ಸಚಿವ ಎಸ್ ಸುರೇಶ್ ಕುಮಾರ್
ಕೊಡಗು – ವಿ ಸೋಮಣ್ಣ
ಚಿಕ್ಕಮಗಳೂರು – ಸಚಿವ ಸಿ.ಟಿ.ರವಿ
ಹಾವೇರಿ ಮತ್ತು ಉಡುಪಿ – ಸಚಿವ ಬಸವರಾಜ್ ಬೊಮ್ಮಾಯಿ
ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ
ತುಮಕೂರು ಮತ್ತು ಹಾಸನ – ಸಚಿವ ಜೆ ಸಿ ಮಾಧುಸ್ವಾಮಿ
ಗದಗ – ಸಚಿವ ಸಿಸಿ ಪಾಟೀಲ್
ಕೋಲಾರ – ಸಚಿವ ಹೆಚ್ ನಾಗೇಶ್
ಬೀದರ್ ಮತ್ತು ಯಾದಗಿರಿ – ಸಚಿವ ಪ್ರಭು ಚೌವ್ಹಾಣ
ವಿಜಯಪುರ – ಸಚಿವೆ ಶಶಿಕಲಾ ಜೊಲ್ಲೆ
ಉತ್ತರ ಕನ್ನಡ – ಸಚಿವ ಶಿವರಾಂ ಹೆಬ್ಬಾರ್
ಮೈಸೂರು – ಸಚಿವ ಎಸ್ ಟಿ ಸೋಮಶೇಖರ್
ಚಿಕ್ಕಬಳ್ಳಾಪುರ – ಸಚಿವ ಡಾ.ಕೆ.ಸುಧಾಕರ್
ಮಂಡ್ಯ – ಸಚಿವ ಕೆಸಿ ನಾರಾಯಣ ಗೌಡ
ಬಳ್ಳಾರಿ – ಸಚಿವ ಆನಂದ್ ಸಿಂಗ್
ದಾವಣಗೆರೆ – ಸಚಿವ ಬಿಎ ಬಸವರಾಜು
ಕೊಪ್ಪಳ – ಸಚಿವ ಬಿಸಿ ಪಾಟೀಲ್
