ಬ್ರೇಕಿಂಗ್ ನ್ಯೂಸ್
ಬೋರ ನಾಯಕ ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಕೃಷಿ ಭೂಮಿ ಕಬಳಿಕೆಗೆ ಯತ್ನಿಸುತ್ತಿರುವ ಜಿಲ್ಲಾಡಳಿತದ ದೌರ್ಜನ್ಯ ಖಂಡಿಸಿ,ಮಂಜೂರಾಗಿರುವ ಕೃಷಿ ಭೂಮಿಗೆ ದುರಸ್ತು ಮಾಡಿಕೊಡುವಂತೆ ಆಗ್ರಹಿಸಿ ಭೂ ಆಕ್ರಮಣದ ವಿರುದ್ಧ ಪ್ರತಿರೋಧ ಸಮಾವೇಶ ವನ್ನು ದಿನಾಂಕ 18-9-18 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಪತ್ರಿಕಾಗೋಷ್ಟಿ ಮೂಲಕ ತಿಳಿಸಿದರು. ಕರ್ನಾಟಕ ಪ್ರಾಂತ ರೈತ ಸಂಘ ಕುದರುಗುಂಡಿ ಕಾಲೋನಿ ಗ್ರಾಮ ಸಮಿತಿ ಹಾಗೂ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ತಾಲ್ಲೂಕು ಸಮಿತಿ ಜಂಟಿಯಾಗಿ ಸಂಘಟಿಸುತ್ತಿರುವ ಪ್ರತಿರೋಧ ಸಮಾವೇಶವನ್ನು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ರವರು ಉಧ್ಘಾಟಿಸುವರು.ಮುಖ್ಯ ಅತಿಥಿಗಳಾಗಿ ಹಿರಿಯ ರೈತ ನಾಯಕರಾದ ಶ್ರೀಮತಿ ಸುನಂದಜಯರಾಂ ,ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ವೆಂಕಟಗಿರಿಯಯ್ಯ ,ಕೆಪಿಆರ್ ಎಸ್ ಜಿಲ್ಲಾ ಮುಖಂಡರಾದ ಟಿ.ಎಲ್ ಕೃಷ್ಣೇಗೌಡ,ಕೃಷಿ ಕೂಲಿಕಾರರ ಜಿಲ್ಲಾ ಅಧ್ಯಕ್ಷರಾದ ಎಂ.ಪುಟ್ಟಮಾದು,ಬೋರಾಪುರ ಶಂಕರೇಗೌಡ ,ಸಿ ಕುಮಾರಿ ಸೇರಿದಂತೆ ಹಲವು ಜಿಲ್ಲಾ ಮುಖಂಡರುಗಳು ಭಾಗವಹಿಸಲಿದ್ದಾರೆ.ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವ ಕೆಪಿಟಿಸಿಎಲ್ ಪ್ರಯತ್ನಕ್ಕೆ ಜಿಲ್ಲಾ ಆಡಳಿತ ತಡೆ ಒಡ್ಡಬೇಕು ಇಲ್ಲವಾದರೆ ಹೋರಾಟ ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಮರಳಿಗ ಶಿವರಾಜ್ .ಕೆಪಿಆರ್ ಎಸ್ ಜಿಲ್ಲಾ ಮುಖಂಡ ರಾದ ಭಾನುಪ್ರಕಾಶ್ ,ವೆಂಕಟೇಶ, ಸಿದ್ದಯ್ಯ, ಆನಂದ್ ಇದ್ದರು