ಬ್ರೇಕಿಂಗ್ ನ್ಯೂಸ್ ಮದ್ದೂರು: ಜಿಲ್ಲೆಯ

ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟೆಯ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯದಂತೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿ ತಡೆದ ಪ್ರತಿಭಟನೆ ಮಾಡಿದರು.
ಹೆದ್ದಾರಿಗೆ ಆಗಮಿಸಿದ ವೇದಿಕೆ ಕಾರ್ಯಕರ್ತರು ಈ ಕೂಡಲೇ ಕೆಅರ್‍ಎಸ್ ಸುತ್ತಮುತ್ತ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕೆಲಕಾಲ ಸಂಚಾರ ತಡೆದ ಪರಿಣಾಮ ಸಂಚರ ಅಸ್ತವ್ಯಸ್ತಗೊಂಡಿತ್ತು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‍ಗೌಡ ಮಾತನಾಡಿ, ಕೆಆರ್‍ಎಸ್ ಸುತ್ತಮುತ್ತಲ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರಿಂದ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಾಗುವ ಸಾಧ್ಯತೆ ದಟ್ಟವಾಗಿದ್ದು, ಕೆಆರ್‍ಎಸ್ ಅಣೆಕಟ್ಟೆಗೆ ತೊಂದರೆಯಾದರೆ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆ ಸೇರಿದಂತೆ ಹತ್ತಾರು ಜಿಲ್ಲೆಗಳಿಗೆ ಇದರಿಂದ ತೊಂದರೆಯಾಗುತ್ತದೆ ಮತ್ತು ಈ ಭಾಗದ ರೈತಾಪಿ ವರ್ಗದವರು ಕೆಆರ್‍ಎಸ್ ಅಣೆಕಟ್ಟೆಯನ್ನೆ ನಂಬಿ ಬೇಸಾಯ ಮಾಡುತ್ತಿದ್ದು, ಒಂದು ವೇಳೆ ಅಣೆಕಟ್ಟೆಗೆ ತೊಂದರೆಯಾದರೆ ತುಂಬಾ ಸಮಸ್ಯೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವೇದಿಕೆ ವತಿಯಿಂದ ರಾಜ್ಯವ್ಯಾಪಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಮಾತನಾಡಿ, ಕೆಆರ್‍ಎಸ್ ಅಣೆಕಟ್ಟೆಯಿಂದ ಲಕ್ಷಾಂತರ ರೈತರು ನೆಮ್ಮದಿಯಿಂದ ಬೇಸಾಯ ಮಾಡುತ್ತಿದ್ದಾರೆ ಮತ್ತು ಹಲವಾರು ಜಿಲ್ಲೆಯ ಜನರಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ. ಜತೆಗೆ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕೆಆರ್‍ಎಸ್ ಅಣೆಕಟ್ಟೆ ಕಟ್ಟಲು ತಮ್ಮದೆಯಾದ ಮಹತ್ತರವಾದ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲ್ಲೆಯಲ್ಲ ಕಟ್ಟೆ ಉಳಿಸಲು ಸರ್ಕಾರ ಮುಂದಾಗಗೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿನೂತನ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ, ವೇದಿಕೆ ಜಿಲ್ಲಾ ಉಪಾಧ್ಯಕ್ಷ ಯರಗನಹಳ್ಳಿ ಮಹಲಿಂಗು, ಮುಖಂಡರಾದ ಮರಳಿಗ ಶಿವರಾಜು, ರಮೇಶ್, ಉಮೇಶ್, ಮಿಲ್ಟ್ರಿ ಕುಮಾರ್, ಯಾಕೂಬ್, ಚಂದ್ರಕುಮಾರ್, ಮೂರ್ತಿ, ಜಯವೀರೇಗೌಡ, ಶ್ರೀನಿವಾಸ್, ಶಂಕರ್, ಆಟೋ ಚಾಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪ್ರತಿಭಟನೆಯ ನೇತೃತ್ವವಹಿಸಿದ್ದರು.

The Ancient Times

Because we’re journalists, we’re impatient. We want to gather the news as quickly as possible, using any technological resource available. And when we’re as sure of the story as we can be, we want to share it immediately, in whatever way reaches the most people. The Internet didn’t plant these ideas in our heads. We’ve always been this way.

Leave a Reply