ಬ್ರೇಕಿಂಗ್ ನ್ಯೂಸ್ . ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲ್ಲೂಕಿನ ಹಂಗರಹಳ್ಳಿ ಕಲ್ಲುಕೋರೆಯಲ್ಲಿ
ಬ್ರೇಕಿಂಗ್ ನ್ಯೂಸ್
ಮಂಡ್ಯ ಜಿಲ್ಲೆಯ
ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲ್ಲೂಕಿನ ಹಂಗರಹಳ್ಳಿ ಕಲ್ಲುಕೋರೆಯಲ್ಲಿ ಜೀತದಾಳು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕು ಹಗರಿಬೊಮ್ಮನಹಳ್ಳಿ ಗ್ರಾಮದ ಕರಿಯಪ್ಪ ಮಾದರ ಅವರನ್ನು ಹತ್ಯೆ ಮಾಡಿರುವ ಕೃತ್ಯವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿ ಇಂದು ಪ್ರತಿಭಟನೆ ನಡೆಸಲಾಯಿತು
ಪಟ್ಟಣದ ಪ್ರವಾಸಿ ಮಂದಿರದ ಬಳಿ ಕಾರ್ಯಕರ್ತರು ಜಮಾವಣೆಗೊಂಡು ಅಲ್ಲಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಧಿಕ್ಕಾರವನ್ನು ಕೂಗುತ್ತಾ ತಾಲ್ಲೂಕು ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಿದರು
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಸೋಮನಹಳ್ಳಿ ಅಂದಾನಿ ಅವರು ಮಾತನಾಡಿ ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀ ಉಮೇಶ್ ಅವರ ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕರಿಯಪ್ಪ ಮಾದರ ಕೊಲೆಯನ್ನು ಸಿಓಡಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು
ಮಂಡ್ಯ ಜಿಲ್ಲೆಯಲ್ಲಿ ಕಲ್ಲುಗಣಿಗಳಲ್ಲಿ ಜೀತದಾಳುಗಳಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಬಿಡುಗಡೆಗೊಳಿಸ ಬೇಕು ಮಂಡ್ಯ ಜಿಲ್ಲೆಯಲ್ಲಿ ಜೀತ ಪ್ರಕರಣಗಳ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು ಪ್ರಕರಣಗಳನ್ನು ತಡೆಗಟ್ಟಲು ವಿಫಲವಾಗಿರುವುದು ರಿಂದ ಜಿಲ್ಲಾಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಜಿಲ್ಲೆಯಲ್ಲಿ ಅಕ್ರಮ ಕಲ್ಲು ಕ್ವಾರೆಗಳಲ್ಲಿ ಇಟ್ಟಿಗೆ ಗೂಡುಗಳಲ್ಲಿ ಕೋಳಿ ಫಾರಂಗಳಲ್ಲಿ ಜೀತದಾಳುಗಳನ್ನಾಗಿ ವರ್ಷಾನುಗಟ್ಟಲೆ ದುಡಿಸಿಕೊಳ್ಳುತ್ತಿದ್ದಾರೆ ಕೆಲವು ಭ್ರಷ್ಟ ಅಧಿಕಾರಿಗಳ ಬೆಂಬಲದಿಂದ ಜೀತ ಪದ್ಧತಿ ಜೀವಂತವಾಗಿದೆ ಅಸ್ಪೃಶ್ಯತೆ ಜೀತ ಪದ್ಧತಿ ನಿಷೇಧವಿದ್ದರೂ ಸಂಪೂರ್ಣವಾಗಿ ತಡೆಯಲಾಗದ ರಾಜ್ಯ ಸರ್ಕಾರ ಮತ್ತು ಮಂಡ್ಯ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಹಂಗರಹಳ್ಳಿ ಕಲ್ಲುಕೋರೆಯಲ್ಲಿ ಕರಿಯಪ್ಪ ಮಾದರ ಜೀವ ತೆಗೆದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಜಿಲ್ಲಾಡಳಿತ ದಕ್ಷ ಅಧಿಕಾರಿಗಳ ತಂಡ ರಚಿಸಿ ಕಲ್ಲು ಕೋರೆಗಳು ಆಲೆಮನೆ ಕೋಳಿ ಫಾರಂ ಇಟ್ಟಿಗೆ ಗೂಡುಗಳಲ್ಲಿ ಜೀತದಾಳು ಗಳನ್ನು ಪತ್ತೆ ಹಚ್ಚಿ ಬಿಡುಗಡೆಗೊಳಿಸಬೇಕು ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದರು ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಪ್ರತಿಭಟನೆಯಲ್ಲಿ ರಾಜಣ್ಣ ಶಿವು ಬಿಎಂ ಸತ್ಯ ನಾರಾಯಣ ರಂಗಸ್ವಾಮಿ ರಾಜೇಶ್ ಮನು ರಘು ಅಂಬರೀಶ್ ಮಾದೇಶ್ ಖಾನ್ ಶಂಕರ್ ರವಿ ಮುತ್ತಯ್ಯ ಹಾಗೂ ಇತರೆ ದಲಿತ ಪರ ಸಂಘಟನೆಗಳು ಜೀವಿಕ ಸಂಸ್ಥೆ ದಲಿತಪರ ಸಂಘಟನೆಗಳು ಭಾಗವಹಿಸಿದ್ದರು
ವರದಿ: ಗಿರೀಶ್ ರಾಜ್ ಮತ್ತು ಬೋರನಾಯಕ