ಪ್ರತ್ಯೇಕ ರಾಜ್ಯ ಹೋರಾಟದ ಮುಂಚೂಣಿ ವಹಿಸಲು ಸಿದ್ಧ: ಶ್ರೀರಾಮುಲು
ಬಳ್ಳಾರಿ: ರಾಜ್ಯ ಸರಕಾರ ಉತ್ತರ ಕರ್ನಾಟಕವನ್ನು ಇದೇ ರೀತಿ ಕಡೆಗಣಿಸಿದಲ್ಲಿ, ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ನಡೆಸುವುದಾಗಿ ಶಾಸಕ ಶ್ರೀರಾಮುಲುಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರ, ಯೋಜನೆಗಳ ಅನುಷ್ಠಾನ ಅನುದಾನ ನೀಡಿಕೆಯಲ್ಲಿ ಉತ್ತರ ಕರ್ನಾಟಕಭಾಗಕ್ಕೆ ಅನ್ಯಾಯ ಎಸಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪ್ರತ್ಯೇಕ ರಾಜ್ಯದ ಹೋರಾಟ ನಡೆಸುವುದಾಗಿ ಹೇಳಿದರು.
ಸಾಲಮನ್ನಾ ಮತ್ತು ಮಹದಾಯಿ ಹೋರಾಟಗಾರರ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗದ ರೈತರ ಕುರಿತು ಸಿಎಂ ಕುಮಾರಸ್ವಾಮಿ ಅಗೌರವದಿಂದ ಮಾತನಾಡುತ್ತಿದ್ದಾರೆ. ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಎರಡು ತಿಂಗಳಾದರೂ ಇನ್ನೂ ಜಿಲ್ಲಾಮಂತ್ರಿಗಳ ನೇಮಕವಾಗಿಲ್ಲ. ಇದೊಂದು ನಿಷ್ಕ್ರಿಯ ಸರಕಾರ ಎಂದು ಶ್ರೀರಾಮುಲು ಟೀಕಿಸಿದರು.