ನಿರ್ಗತಿಕರು ಹಾಗೂ ಕಡುಬಡವರಿಗೆ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರಾದ B M ಕಿರಣ್ ರವರು ಒಂದು ತಿಂಗಳಿಗಾಗುವಷ್ಟು ಆಹಾರದ ಕಿಟ್ ಹಾಗೂ ದಿನಬಳಕೆ ಸಾಮಗ್ರಿಗಳನ್ನು ವಿತರಿಸಲಾಯಿತು
ಬೋರ ನಾಯಕ ಅವರಿಂದ ವರದಿ | ಮಂಡ್ಯ ಜಿಲ್ಲೆ | ಕೊನೆಯದಾಗಿ ಏಪ್ರಿಲ್ 27 2020 ರಂದು ನವೀಕರಿಸಲಾಗಿದೆ
ಮಂಡ್ಯ ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದ ಹೆಸರಾಂತ ಸಮಾಜ ಸೇವಕರು ಹಾಗೂ ಶ್ರೀ ಸುಬ್ರಹ್ಮಣ್ಯ ಸೇವಾ ಅಧ್ಯಕ್ಷರಾದ ಕಿರಣ್ ರವರು ತಾಲೂಕಿನ 50ಕ್ಕೂ ಹೆಚ್ಚು ಹಳ್ಳಿಯ ಕಡುಬಡವರಿಗೆ ಮತ್ತು ನಿರ್ಗತಿಕರನ್ನು ಗುರುತಿಸಿ ಒಂದು ತಿಂಗಳಿಗಾಗುವಷ್ಟು ಅಕ್ಕಿ .ತರಕಾರಿ. ಸಿಕ್ಕರೆ. ಅಡಿಗೆ ಎಣ್ಣೆ. ಹಾಗೂ ದಿನನಿತ್ಯ ಬಳಸುವ ವಸ್ತುಗಳನ್ನು ಉಚಿತವಾಗಿ ವಿತರಿಸಿದರು.
ಲಾಕ್ ಡೌನ್ ಕುರಿತು ಮಾತನಾಡಿದ ಬಿ ಎಂ ಕಿರಣ್ ರವರು ಸರ್ಕಾರದ ಆದೇಶವನ್ನು ಪಾಲಿಸಬೇಕು ಕೋರೋನ ವೈರಸ್ ನಿಯಂತ್ರಿಸಲು ನಮ್ಮ ತಾಲೂಕಿನ ಜನ ಕೈಜೋಡಿಸಬೇಕು ಹಾಗೂ ಕೋರೋನ ವೈರಸ್ ಮುಕ್ತ ತಾಲೂಕು ಎನ್ನುವ ಹೆಗ್ಗಳಿಕೆಗೆ ಪಾಲುದಾರರಾಗಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಪಂಚಾಯತಿ ಸದಸ್ಯರಾದ ಪುಟ್ಟಸ್ವಾಮಿಗೌಡ. ಕಿಕ್ಕೇರಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಆದ H k ನವೀನ್. ಕಿಕ್ಕೇರಿ ಹೋಬಳಿಯ ಜೆಡಿಎಸ್ ಘಟಕದ ಅಧ್ಯಕ್ಷರಾದ ಕಾಯಿ ಮಂಜೇಗೌಡ. ಮುಖಂಡರಾದ . ಕಡೆಹೇಮ್ಗೆ ರಮೇಶ್. ಗೌತಮ್. ಮಂಜು. ಶಶಿ ಇನ್ನಿತರರಿದ್ದರು.