ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಹಾಗೂ ರೇವತಿ
Report By News Toniq | Bengaluru | Last Updated at April 17 2020
ರಾಮನಗರ : ಸ್ಯಾಂಡಲ್ ವುಡ್ ನ ಯುವರಾಜ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯ ವಿವಾಹ ಇಂದು ಬೆಳಗ್ಗೆ ರೇವತಿ ಜೊತೆ ನೆರವೇರಿದೆ..ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿಯ ಫಾಂ ಹೌಸ್ ನಲ್ಲಿ ನಲ್ಲಿ ಶಾಸ್ತ್ರೋಕ್ತವಾಗಿ ಗುರು ಹಿರಿಯರು ಕೆಲವೇ ಕೆಲವು ಕುಟುಂಬಸ್ಥರ ಸಮ್ಮುಖದಲ್ಲಿ ನಿಖಿಲ್ ಹಾಗೂ ರೇವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..ಮದುವೆ ಸಮಾರಂಭದಲ್ಲಿ ನಿಖಿಲ್ ಅವರ ತಾತ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಅಜ್ಜಿ ಚೆನ್ನಮ್ಮ ಹಾಗೂ ತಂದೆ ಕುಮಾರಸ್ವಾಮಿ ಹಾಗೂ ತಾಯಿ ಅನಿತಾ ಕುಮಾರಸ್ವಾಮಿ ,ರೇವತಿ ತಂದೆ ತಾಯಿ ವಧು ವರರಿಗೆ ಮುಹರ‍್ತ ಮಾಡಿ ಆಶರ‍್ವದಿಸಿದ್ದಾರೆ..ನಿಖಿಲ್ ಹಾಗೂ ರೇವತಿ ಕುಟುಂಬಸ್ಥರು ,ಆಪ್ತರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ರು..ಅದ್ದೂರಿಯಾಗಿ ಮದ್ವೆ ಸಮಾರಂಭ ನಡೆಯಬೇಕಿತ್ತು.ಆದ್ರೆ ಕೊರೊನಾ ಹರಡುತ್ತಿರುವ ಹಿನ್ನಲೆ ಕುಮಾರಸ್ವಾಮಿ ಯಾರು ಮದ್ವೆಗೆ ಬರದಂತೆ ಕರೆ ನೀಡಿದ್ರು..ಈ ಹಿನ್ನಲೆ ಕೆಲವು ಮಂದಿ ಮದ್ವೆಯಲ್ಲಿ ಪಾಲ್ಗೊಂಡಿದ್ರು..ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿಯ ಮ್ಯಾರೇಜ್ ಅದ್ದೂರಿಯಾಗಿ ನಡೆಯಬೇಕಿತ್ತು..ಆದ್ರೆ ಕೊರೊನಾ ಮಹಾಮಾರಿ ಎಲ್ಲದಕ್ಕೂ ತಣ್ಣೀರೆಚಿದೆ..ಇನ್ನು ನಿಖಿಲ್ ಮದ್ವೆ ಹಿನ್ನಲೆ ಅದ್ದೂರಿಯಾಗಿ ಫಾಂ ಹೌಸ್ ಅನ್ನ ಹೂವುಗಳಿಂದ ಅಲಂಕರಿಸಲಾಗಿತ್ತು..ಕಡಿಮೆ ಜನ ಸೇರಿದ್ರು ಸಹ ಫಾಂ ಹೌಸ್ ಮಾತ್ರ ಕಂಗೋಳಿಸುವಂತೆ ಸಿಂಗರಿಸಲಾಗಿತ್ತು..ಇನ್ನು ನಿಖಿಲ್ ಹಾಗೂ ರೇವತಿ ಮದುವೆ ಸಮಾರಂಭದಲ್ಲಿ ರಾಜಕೀಯ ಮುಖಂಡರು ಕೂಡ ಭಾಗಿಯಾಗಿದ್ರು. ಮದ್ವೆಯಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಂಡಿಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ..