ಡಿಯರ್ ಭಾಸ್ಕರ್ ರಾವ್ ಅಂತ ಖಡಕ್ ಆಗಿ ಪತ್ರ ಬರೆದ ಡಿಜಿ ಪ್ರವೀಣ್ ಸೂದ್ ..!
Report By News Toniq | Bengaluru | Last Updated at April 21 2020
ಬೆಂಗಳೂರು: ಕಮೀಷನರ್ ಕಾರ್ಯ ವೈಖರಿ ವಿರುದ್ದ ಡಿಜಿ ಪ್ರವೀಣ್ ಸೂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ವಾಹನಗಳ ಸಂಚಾರ ದಿನೇ ದಿನೇ ಜಾಸ್ತಿಯಾಗ್ತಿದೆ.ಲಾಕ್ ಡೌನ್ ಏರಿಯಾಗಳಲ್ಲಿ ಟ್ರಾಫಿಕ್ ಪೊಲೀಸರು ಏನ್ ಕೆಲಸ ಮಾಡ್ತಿದ್ದಾರೆ..ಲಾಕ್ ಡೌನ್ ಏರಿಯಾಗಳಲ್ಲಿ ಇರೋ ಬ್ಯಾರಿಗೇಡ್ ಸಡನ್ ಆಗಿ ತೆಗೆದಿದ್ದಾರೆ.ಹಲವಾರು ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಪಾಸ್ ಗಳನ್ನ ಚೆಕ್ ಮಾಡ್ತಿಲ್ಲ.ಟ್ರಾಪಿಕ್ ಅಧಿಕಾರಿಗಳು ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತೆ ಆಗ್ತಿಲ್ಲ..ಬೇರೆ ಜಿಲ್ಲೆಯ ಪಾಸ್ ಒಂದಿರುವ ವಾಹನಗಳು ಸಿಟಿಯಲ್ಲಿ ಓಡಾಡೋ ಹಾಗಿಲ್ಲ .ಜಿಲ್ಲಾ ಎಸ್ ಪಿ, ಜಿಲ್ಲಾಧಿಕಾರಿ ಕೊಟ್ಟಿರೋ ಪಾಸ್ ಇರೋ ವಾಹನಗಳು ನಗರದಲ್ಲಿ ಓಡಾಡೋ ಹಾಗಿಲ್ಲ.ಅಂತಹ ವಾಹನಗಳನ್ನು ಕೂಡಲೇ ಸೀಜ್ ಮಾಡುವಂತೆ ಡಿಜಿ ಆದೇಶಿಸಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಗೆ ಪತ್ರ ಬರೆದಿದ್ದಾರೆ..ಸೂಕ್ತ ಕಾರಣ ಇಲ್ಲದೆ ಪಾಸ್ ಗಳನ್ನು ವಿತರಣೆ ಮಾಡೋ ಹಾಗಿಲ್ಲ.ತುರ್ತು ಕಾರ್ಯಗಳಿಗೆ ಮಾತ್ರ ಪೊಲೀಸ್ ಠಾಣೆಯಲ್ಲಿ ಪಾಸ್ ನೀಡಬೇಕು.ಲಾಕ್ ಡೌನ್ ಏರಿಯಾಗಳಲ್ಲಿ ಬ್ಯಾರಿಗೇಡ್ ಗಳನ್ನು ಹೆಚ್ಚು ಮಾಡಬೇಕು.ಮುಂಜಾನೆ ಹಾಗೂ ಸಂಜೆ ಅತಿ ಹೆಚ್ಚಾಗಿ ಓಡಾಡುತ್ತಿರೋ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಬೇಕು ಎಂದು ಡಿಜಿಪಿ ಪ್ರವೀಣ್ ಸೂದ್ ಸೂಚಿಸಿದ್ದಾರೆ..ಊಟ ವಿತರಿಸೋ ಎನ್ ಜಿ ಒ ಗಳಿಗೂ ಪಾಸ್ ಕಡ್ಡಾಯ ಇರಬೇಕು..ವೈದ್ಯರು, ಸರ್ಕಾರಿ ಅಧಿಕಾರಿಗಳು, ತುರ್ತು ಅಗತ್ಯ ಸೇವೆಗೆ ಮಾತ್ರ ಪಾಸ್ ಇಲ್ಲದೆ ಓಡಾಟ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ಇಷ್ಟೆಲ್ಲಾ ಸೂಚನೆ ಕೊಟ್ಟು ಮಹಾ ನಿರ್ದದೇಶಕ ಪ್ರವೀಣ್ ಸೂದ್ ರಿಂದ ಪತ್ರ ಬರೆದಿದ್ದಾರೆ.
