ಕಮೀಷನರ್ ಭಾಸ್ಕರ್ ರಾವ್ ಆದೇಶಕ್ಕೆ ಬೆಚ್ಚಿಬಿದ್ದ ಪೊಲೀಸ್ ಸಿಬ್ಬಂದಿ..!
ಕಮೀಷನರ್ ಆದೇಶ ಕೇಳಿ ಹೊಯ್ಸಳ ಪೊಲೀಸ್ರಿಗೆ ಹೊಸ ತಲೆ ನೋವು ಶುರುವಾಗಿದೆ. ಯಾಕಂದ್ರೆ ನಾರ್ಮಲ್ ಆಗಿರೋ ಆರೋಗ್ಯ ಸಮಸ್ಯೆ ಇದ್ರೆ ಅಂತಹವರನ್ನ ಆಸ್ಪತ್ರೆಗೆ ಸೇರಿಸೋದ್ರಲ್ಲಿ ಪೊಲೀಸ್ರು ಹಿಂದೆ ಮುಂದೆ ನೋಡ್ತಿರಲಿಲ್ಲ.ಆದರೆ ಕೊರೊನಾ ಇರೋರನ್ನು ಸೇರಿಸುವಾಗ ನಮಗೆ ಕೊರೊನಾ ಬಂದ್ರೆ ಏನು ಮಾಡೋದು ಅಂತ ಭಯಭೀತರಾಗಿದ್ದಾರೆ..
ಬೆಂಗಳೂರು: ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವ್ರು ತಮ್ಮ ಸಿಬ್ಬಂದಿಗಳಿಗೆ ಹೊಸ ಆದೇಶವನ್ನ ಮಾಡಿದ್ದಾರೆ. ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನಸಾಮಾನ್ಯರು ಕರೆ ಮಾಡಿ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಕೇಳಿದ್ರೆ ಅವರನ್ನ ಹೊಯ್ಸಳ ವಾಹನದಲ್ಲಿ ಕರ್ಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಅಂದಿದ್ದಾರೆ.
ಕಮೀಷನರ್ ಆದೇಶ ಕೇಳಿ ಪೊಲೀಸ್ರಿಗೆ ಹೊಸ ತಲೆ ನೋವು ಶುರುವಾಗಿದೆ. ಯಾಕಂದ್ರೆ ನಾರ್ಮಲ್ ಆಗಿರೋ ಆರೋಗ್ಯ ಸಮಸ್ಯೆ ಇದ್ರೆ ಅಂತಹವರನ್ನ ಆಸ್ಪತ್ರೆಗೆ ಸೇರಿಸೋದ್ರಲ್ಲಿ ಪೊಲೀಸ್ರು ಹಿಂದೆ ಮುಂದೆ ನೋಡ್ತಿರಲಿಲ್ಲ. ಆದ್ರೆ ಈ ಸಮಯದಲ್ಲಿ ಜನ ಕೊರೋನಾ ಇದ್ರು ಕೂಡಾ ಅದನ್ನ ಮುಚ್ಚಿಟ್ಟು ಆಸ್ಪತ್ರೆಗೆ ಕರ್ಕೊಂಡು ಹೋಗುವಂತೆ ಹೇಳ್ತಾರೆ. ಇಂತಹ ಸಂದರ್ಭದಲ್ಲಿ ಹೆಚ್ಚು ಕಡಿಮೆ ಆದ್ರೆ ನಮ್ಮ ಕುಟುಂಬಕ್ಕೆ ಗತಿಯಾರು ಅಂತ ಪ್ರಶ್ನೆ ಮಾಡ್ತಿದ್ದಾರೆ.ಯಾಕಂದ್ರೆ ಹೊಯ್ಸಳ ಸಿಬ್ಬಂದಿಯ ಬಳಿ ಅತ್ಯಾಧುನಿಕವಾದಂತಹ ಮಾಸ್ಕ್ ಗಳಿಲ್ಲ. ಸರಿಯಾದ ಸ್ಯಾನಿಟೈಸರ್ಸ್ ಗಳು ಕೂಡಾ ಇಲ್ಲ. ಅಲ್ಲದೆ ಸುರಕ್ಷತಾ ಸೂಟ್ ಗಳು ಕೂಡಾ ಇಲ್ಲ. ಒಂದು ವೇಳೆ ಕೊರೋನಾ ವೈರಸ್ ಇರೋ ವ್ಯಕ್ತಿ ಸಹಾಯ ಕೇಳಿ ಹೊಯ್ಸಳದಲ್ಲಿ ಪ್ರಯಾಣಿಸಿದ್ರೆ ಪೊಲೀಸ್ರ ಗತಿಯೇನಾಗಬೇಕು ಅನ್ನೋದು ಅವರ ಪ್ರಶ್ನೆ.ನಗರದಲ್ಲಿ ಸಾಕಷ್ಟು 108 ವಾಹನಗಳು ಕೆಲಸ ಇಲ್ಲದೆ ಖಾಲಿಯಾಗಿ ನಿಂತಿವೆ. ಅವುಗಳ ಸೇವೆಯನ್ನ ಪಡೆಯದೆ ಪೊಲೀಸ್ರಿಗೆ ಯಾವುದೇ ಸುರಕ್ಷತಾ ಸಲಕರಣೆಗಳನ್ನ ನೀಡದೆ ಸಾವಿನ ದವಡೆಗೆ ಹೋಗು ಅಂದ್ರೆ ಅದು ಸಾಧ್ಯನಾ ಅಂತಿದ್ದಾರೆ.
ಪೊಲೀಸ್ರಿಗೆ ವಜ್ರ ಕವಚವಿಲ್ಲ. ಅವರಲ್ಲೂ ಸಾಮಾನ್ಯ ಜನರಂತೆ ರಕ್ತವೇ ಹರಿಯುತ್ತಿರೋದು. ಜನಕ್ಕೆ ವೈರಸ್ ಬಗ್ಗೆ ಎಷ್ಟು ಭಯವಿದೆಯೋ ಪೊಲೀಸ್ರಿಗೂ ಅಷ್ಟೇ ಭಯವಿದೆ. ಆದ್ರೆ ಅದನ್ನ ಯಾಕೆ ಯಾರು ಅರ್ಥ ಮಾಡಿಕೊಳ್ತಿಲ್ಲ ಅಂತ ಹೊಯ್ಸಳ ಸಿಬ್ಬಂಧಿ ನೊಂದುಕೊಂಡಿದ್ದಾರೆ.
ಮರ್ಯಾದೆ ಪ್ರಶ್ನೆಯಿಂದಾಗಿ ಜನ 108ರಲ್ಲಿ ಹೋಗೋದಕ್ಕೆ ಹಿಂದೆ ಮುಂದೆ ನೋಡ್ತಿದ್ದಾರೆ. ಹೊಯ್ಸಳದಲ್ಲಾದ್ರೆ ಯಾರು ತಮ್ಮ ಬಗ್ಗೆ ಅನುಮಾನಪಡೋದಿಲ್ಲ ಅಂತ ಅಂದುಕೊಂಡು ಫೋನ್ ಮಾಡೋದಕ್ಕೆ ಶುರುಮಾಡಿದ್ದಾರೆ. ಹೀಗಾಗಿ ರೋಗಿಗಳ ರಕ್ಷಣೆಗೆ ಹೋದ್ರೆ ತಮ್ಮ ಜೀವಕ್ಕೆ ಅಪಾಯ, ಹೋಗದೇ ಇದ್ರೆ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಲ್ಲಾ ಅಂತ ತಮ್ಮ ಕಷ್ಟವನ್ನ ಗಂಟಲಲ್ಲೇ ನುಂಗಿಕೊಂಡಿದ್ದಾರೆ.