ಕನ್ನಡದ ನಟ ‘ವಾಯುಪುತ್ರ’ ಖ್ಯಾತಿಯ ಚಿರಂಜೀವಿ ಸರ್ಜಾ ಇನ್ನಿಲ್ಲ!

ನಟ ಚಿರಂಜೀವಿ ಸರ್ಜಾ ಅವರು ಇನ್ನಿಲ್ಲ. 2018ರಲ್ಲಿ ನಟಿ ಮೇಘನಾ ರಾಜ್ ಅವರನ್ನು ಮದುವೆಯಾಗಿದ್ದರು. ಇಂದು ಅವರು ವಿಧಿವಶರಾಗಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ‘ವಾಯುಪುತ್ರ’ ನಟ ಚಿರಂಜೀವಿ ಸರ್ಜಾ ಅವರು ಕೊನೆಯುಸಿರೆಳೆದಿದ್ದಾರೆ.

ನಟ ಚಿರಂಜೀವಿ ಇನ್ನಿಲ್ಲ. ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ದಾಖಲಾಗಿದ್ದರು. ಉಸಿರಾಟದ ತೊಂದರೆಯಿಂದ ಚಿರು ಬಳಲುತ್ತಿದ್ದರು.

ಅಪೋಲೋ ವೈದ್ಯರ ತಂಡ ಚಿರು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. 2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದ ಚಿರಂಜೀವಿ ಸರ್ಜಾ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ರಾತ್ರಿಯೇ ಚಿರಜೀವಿ ಸರ್ಜಾಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ 3:00 ಗಂಟೆಗೆ ಅಪಾಯಿಂಟ್ಮೆಂಟ್ ಇತ್ತು. ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ಮನೆಯಲ್ಲಿ ಚಿರಂಜೀವಿ ಕುಸಿದು ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಟ ಚಿರಂಜೀವಿ ಕೊನೆಯುಸಿರೆಳೆದಿದ್ದಾರೆ. . ಚಿರಂಜೀವಿ ಸರ್ಜಾಗೆ 39 ವರ್ಷವಾಗಿತ್ತು. 1980 ಅಕ್ಟೋಬರ್ 17ರಂದು ಚಿರು ಜನಿಸಿದ್ದರು.
‘ವಾಯುಪುತ್ರ’ ಚಿತ್ರದ ಮೂಲಕ ಚಿರಂಜೀವಿ ಸರ್ಜಾ ಬಣ್ಣದ ಲೋಕಕ್ಕೆ ಎಂಟ್ರಿ
‘ವಾಯುಪುತ್ರ’ ಚಿತ್ರದ ಮೂಲಕ ಇವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ‘ದಂಡಂ ದಶಗುಣಂ’, ‘ವರದ ನಾಯಕ’, ‘ಸಿಂಗ’, ‘ಚಿರು’, ‘ಸಿಂಗ’, ‘ಗಂಡೆದೆ’ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. 22 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಚಿರಂಜೀವಿ ಸರ್ಜಾ ನಟಿಸಿದ್ದರು. ಸುದೀಪ್ ಜೊತೆಗೆ ಅವರು ‘ವರದ ನಾಯಕ’ ಸಿನಿಮಾದಲ್ಲಿ ನಟಿಸಿದ್ದರು. ಚಿರು ನಟನೆಯ ‘ಚಂದ್ರಲೇಖ’ ಸಿನಿಮಾ ಒಳ್ಳೆಯ ಹಿಟ್ ಆಗಿತ್ತು. ಚಿರಂಜೀವಿ ಕುಟುಂಬ ಆಂಜನೇಯನ ಭಕ್ತರಾಗಿದ್ದರು. ಅರ್ಜುನ್ ಸರ್ಜಾ ಮೂಲಕವೇ ಸಿನಿಮಾ ರಂಗಕ್ಕೆ ಚಿರು ಪರಿಚಯ ಆಗಿದ್ದರು. 2006ರಿಂದ ಅವರು ಸಹಾಯಕ ನಿರ್ದೇಶಕರಾಗಿ ಅರ್ಜುನ್ ಸರ್ಜಾ ಜೊತೆ ಕೆಲಸ ಮಾಡಿದ್ದರು. ಬೆಂಗಳೂರಿನಲ್ಲಿಯೇ ಚಿರು ಶಾಲೆ-ಕಾಲೇಜು ಶಿಕ್ಷಣ ಪೂರೈಸಿದ್ದಾರೆ. ಚಿರಂಜೀವಿ ಖಳನಟ ಶಕ್ತಿ ಪ್ರಸಾದ್ ಅವರ ಮೊಮ್ಮಗ ಕೂಡ ಹೌದು.

ಯಾವಾಗಲೂ ನಗುತ್ತಲೇ ಇರುತ್ತಿದ್ದ ಚಿರು
‘ಏಪ್ರಿಲ್’, ‘ಕ್ಷತ್ರೀಯ’, ‘ರಾಜಮಾರ್ತಾಂಡ’, ‘ರತ್ನಂ’ ಚಿತ್ರಗಳಿಗೆ ಚಿರಂಜೀವಿ ಸರ್ಜಾ ಅವರು ಸಹಿ ಮಾಡಿದ್ದರು. ಇವರ ‘ಸಿಂಗಂ’ ಚಿತ್ರದ ಶ್ಯಾನೆ ಟಾಪ್ ಆಗೋವಳೆ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿತ್ತು. 2019ರಲ್ಲಿ ‘ಸಿಂಗಂ’ ಚಿತ್ರವೊಂದೇ ರಿಲೀಸ್ ಆಗಿದ್ದರೂ ಕೂಡ, ಈ ಚಿತ್ರದ ಹಾಡು ಅವರಿಗೆ ಭರ್ಜರಿ ಜನಪ್ರಿಯತೆ ತಂದುಕೊಟ್ಟಿತ್ತು. ನಟ ಅರ್ಜುನ್ ಸರ್ಜಾ ಅವರ ಅಳಿಯ ಚಿರಂಜೀವಿ ಸರ್ಜಾ. ಇವರ ಸಹೋದರ ಧ್ರುವ ಸರ್ಜಾ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಯಾವಾಗಲೂ ಚಿರಂಜೀವಿ ಸರ್ಜಾ ನಗುತ್ತಲೇ ಇರುತ್ತಿದ್ದರು. ಹೀಗಾಗಿ ಈ ವಿಚಾರ ಹಲವರಿಗೆ ಶಾಕ್ ಉಂಟುಮಾಡಿದೆ.

ಲಾಕ್ ಡೌನ್ ಟೈಮ್‌ನಲ್ಲಿ ಫ್ಯಾಮಿಲಿ ಜೊತೆಗೆ ಕಾಲ ಕಳೆದಿದ್ದ ಚಿರು
ಚಿತ್ರರಂಗದಲ್ಲಿ ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ತುಂಬ ಆತ್ಮೀಯತೆ, ಪ್ರೀತಿಯಿಂದ ಇರುತ್ತಿದ್ದರು. ಲಾಕ್ ಡೌನ್ ಟೈಮ್‌ನಲ್ಲಿ ಮನೆಯವರ ಜೊತೆ ಕಾಲ ಕಳೆಯುತ್ತಿದ್ದ ಚಿರಂಜೀವಿ ಅವರು ಸಾಕಷ್ಟು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದರು. ಕೊರೊನಾ ವೈರಸ್ ಸೋಂಕು ಕೂಡ ಇರೋದರಿಂದ ಚಿರಂಜೀವಿ ಸರ್ಜಾ ಅವರ ಗಂಟಲು ದ್ರವವನ್ನು ಪಡೆದು ಕೊರೊನಾ ಟೆಸ್ಟ್ ಮಾಡಬೇಕಾಗಿದೆಯಂತೆ. ‘ಮೇಘನಾ ಹೊಟ್ಟೆಯಲ್ಲಿ ಪುಟ್ಟ ಚಿರಂಜೀವಿ ಬರ್ತಿದ್ದಾನೆ’ ಎಂದು ನಟಿ ತಾರಾ ಹೇಳಿದ್ದಾರೆ.

The Ancient Times

Because we’re journalists, we’re impatient. We want to gather the news as quickly as possible, using any technological resource available. And when we’re as sure of the story as we can be, we want to share it immediately, in whatever way reaches the most people. The Internet didn’t plant these ideas in our heads. We’ve always been this way.

Leave a Reply

%d bloggers like this: