ಎಣ್ಣೆ ಪ್ರಿಯರಿಂದ ಎಣ್ಣೆ ಪಡೆಯಲು ಭಾರೀ ಕಸರತ್ತು – ವೈನ್ ಶಾಪ್ ಓಪನ್ ಎಂದು ವಂದತಿ ಹಬ್ಬಿಸುತ್ತಿರುವ ಕಿಡಿಗೇಡಿಗಳು
ರಾಜ್ಯದಾದ್ಯಂತ ಕೊರೊನಾ ಹಿನ್ನಲೆ ಲಾಕ್ ಡೌನ್ ಆಗಿದೆ.ಆದರೆ ಕಿಡಿಗೇಡಿಗಳು ವೈನ್ ಸಿಗದೇ ಆತ್ಮಹತ್ಯೆಗೆ ಜನ ಶರಣಾಗುತ್ತಿದ್ದು,ಹೀಗಾಗಿ ಅಬಕಾರಿ ಇಲಾಖೆ ಮಾರ್ಚ್ 31 ರಿಂದ ವೈನ್ ಶಾಪ್ ಓಪನ್ ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರದ ಚಿಹ್ನೆ ಬಳಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ..
ಬೆಂಗಳೂರು: ಎಣ್ಣೆ ಪ್ರಿಯರಿಂದ ಎಣ್ಣೆ ಪಡೆಯಲು ಭಾರೀ ಕಸರತ್ತು ನಡೆಸುತ್ತಿರೋದು ಪತ್ತೆಯಾಗಿದೆ. ಕಿಡಿಗೇಡಿಗಳು ಮಾರ್ಚ್ 31 ರ ಸಂಜೆ 5 ಗಂಟೆಯಿಂದ 7ರವರೆಗೆ ವೈನ್ ಶಾಪ್ ಓಪನ್ ಎಂದು ವಂದತಿ ಹಬ್ಬಿಸುತ್ತಿಸುತ್ತಿದ್ದಾರೆ .

ರಾಜ್ಯದಾದ್ಯಂತ ಕೊರೊನಾ ಹಿನ್ನಲೆ ಲಾಕ್ ಡೌನ್ ಆಗಿದೆ.ಆದರೆ ಕಿಡಿಗೇಡಿಗಳು ವೈನ್ ಸಿಗದೇ ಆತ್ಮಹತ್ಯೆಗೆ ಜನ ಶರಣಾಗುತ್ತಿದ್ದು,ಹೀಗಾಗಿ ಅಬಕಾರಿ ಇಲಾಖೆ ಮಾರ್ಚ್ 31 ರಿಂದ ವೈನ್ ಶಾಪ್ ಗೆ ಒಪನ್ ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರದ ಚಿಹ್ನೆ ಬಳಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ..ಅಲ್ಲದೇ ಕರ್ನಾಟಕ ಭಾವಚಿತ್ರದ ಮೇಲೆ ಅಬಕಾರಿ ಇಲಾಖೆ ಬಾರ್ ಓಪನ್ ಗೆ ಅನುಮತಿ ನೀಡಿದೆ ಎಂದು ಬರೆಯಲಾಗಿದೆ..ಅದರ ಕೆಳಗೆ ಕಿಡಿಗೇಡಿಗಳು govt.of Karnataka ಅಂತ ಬರೆಯಲಾಗಿದೆ..ಇದನ್ನು ಸರ್ಕಾರದ ಆದೇಶದಂತೆ ಬಿಂಬಿಸಲಾಗುತ್ತಿದೆ..ಇಂತಹ ವಂದತಿಗೆ ಯಾರು ಕಿಮಿಗೊಡಬೇಡಿ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ..ಅಲ್ಲದೇ ಯಾವುದೇ ಕಾರಣಕ್ಕೂ ಏಪ್ರಿಲ್ 14 ರವೆಗೆ ಬಾರ್ ಓಪನ್ ಗೆ ಅವಕಾಶವಿಲ್ಲ ಎಂದು ಅಬಕಾರಿ ಇಲಾಖೆ ಉನ್ನತ ಮೂಲಗಳು ತಿಳಿಸಿವೆ..ಹಾಗೇ ಅಬಕಾರಿ ಆಯುಕ್ತರು ನಾಳೆ ಅಂದ್ರೆ ಏಪ್ರಿಲ್ 1 ರಿಂದ ಏಪ್ರಿಲ್ 14 ರವರೆಗೆ ಎಲ್ಲಾ ಬಾರ್ ವೈನ್ ಶಾಪ್ ಮುಚ್ಚಲಾಗುವುದು ಎಂದು ಆದೇಶಸಿದ್ದಾರೆ..