ಇಹಲೋಕ ತ್ಯಜಿಸಿದ ಮುತ್ತಪ್ಪ ರೈ .
ಬೆಂಗಳೂರು: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಹಾಗೂ ಮಾಜಿ ಡಾನ್ ಮುತ್ತಪ್ಪ ರೈ ನಿಧನರಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಬಿಡದಿ ನಿವಾಸಕ್ಕೆ ಮೃತ ದೇಹ ಬರುವ ಸಾಧ್ಯತೆಯಿದ್ದು, ತೆರದವಾಹನದಲ್ಲಿ ಮೃತದೇವ ಶಿಫ್ಟ್ ಮಾಡಲಾಗುವುದು. ಬಿಡದಿ ಬಳಿ ಅಂತಿ ವಿಧಿವಿಧಾನಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅಂತಿಮ ವಿಧಿವಿಧಾನ ಕಾರ್ಯದಲ್ಲಿ ಪಾಲ್ಗೊಳ್ಳಲು ಕೇವಲ ಕುಟುಂಬಸ್ಥರು ಸೇರಿ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸಂಜೆ 4 ಗಂಟೆಗೆ ಮುತ್ತಪ್ಪ ರೈ ಅಂತಿಮ ವಿಧಿವಿಧಾನ ನಡೆಯುವ ಸಾಧ್ಯತೆಯಿದೆ.
ಇಡೀ ಭೂಗತ ಲೋಕವನ್ನು ಕೈಯಲ್ಲೇ ಇಟ್ಟುಕೊಂಡಿದ್ದ ಮುತ್ತಪ್ಪ ರೈ ಕ್ಯಾನ್ಸರ್ ನಿಂದ ಹೊರ ಬರಲಾಗದೇ ಇಹಲೋಕ ತ್ಯಜಿಸಿದ್ದಾರೆ..ಅಪಾರ ಸಂಖ್ಯೆಯ ಜಯಕರ್ನಾಟಕ ಕಾರ್ಯಕರ್ತರನ್ನು ಬಿಟ್ಟು ಹೋಗಿದ್ದಾರೆ.
