ಆಕಸ್ಮಿಕ’ ‘ನಾಗರಹಾವು’ ‘ಮಸಣದ ಹೂ’ ಚಿತ್ರಗಳಿಗೆ ಇವರ ಸಾಹಿತ್ಯವೇ ಜೀವಾಳ
ತ.ರಾ.ಸು ಅವರ ನೂರನೇ ವರ್ಷದ ಜನ್ಮದಿನದ ಸಂದರ್ಭದಲ್ಲಿ ಈ ವಿಶೇಷ ಲೇಖನ ನ್ಯೂಸ್ ಟಾನಿಕ್ ಓದುಗರಿಗೆ ಅರ್ಪಣೆ. ಕನ್ನಡ, ತೆಲುಗು, ಹಿಂದಿ ಸಿನಿಮಾ ರಂಗಕ್ಕೆ ಸಾಹಿತ್ಯ ಸಂಪತ್ತು ನೀಡಿದ್ದ ಮೇರು ಕವಿ ತ.ರಾ.ಸು
ಕನ್ನಡ ಸಾಹಿತ್ಯ ಲೋಕÀದಲ್ಲಿ ಅದ್ವಿತೀಯ ಸಾಧನೆಗೈದ ಮಹಾನ್ ಪುರುಷ ತ.ರಾ.ಸು (ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್) ಅವರಿಗೆ ಇಂದು 100ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ತಮ್ಮ ಸಾಹಿತ್ಯ ಕೃಷಿಯಿಂದ ಕನ್ನಡನಾಡಿನ ಕಂಪನ್ನು ಜಗದಗಲ ವ್ಯಾಪಿಸುವಂತೆ ಮಾಡಿದ ತ.ರಾ.ಸು ಮೂಲತಃ ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದವರು. ರಾಮಸ್ವಾಮಯ್ಯ ಮತ್ತು ಸೀತಮ್ಮ ದಂಪತಿಗಳಿಗೆ 1920 ರ ಏಪ್ರಿಲ್ 21 ರಂದು ಮಳೆಬೆನ್ನೂರಿನಲ್ಲಿ ಜನಿಸಿದ ತ.ರಾ.ಸು ಅವರದ್ದು ಸಾಹಿತಿಗಳ ಪರಂಪರೆ. ಇವರ ತಾತ ಸುಬ್ಬಣ್ಣನವರು ಪ್ರಖ್ಯಾತ ಆಶು ಕವಿಯಾಗಿದ್ದರು. ತ.ರಾ.ಸು ಅವರ ದೊಡ್ಡಪ್ಪ ಪ್ರಖ್ಯಾತಿ ಪಡೆದ ಕನ್ನಡದ ಮೊದಲ ಪ್ರಾಧ್ಯಾಪಕರಾದ ಟಿ.ಎಸ್. ವೆಂಕಣ್ಣಯ್ಯನವರು. ಇವರು ರಾಷ್ಟ್ರಕವಿ ಕುವೆಂಪು ಅವರಿಗೆ ಅಚ್ಚುಮೆಚ್ಚಿನ ಕನ್ನಡ ಗುರುಗಳಾಗಿದ್ದರು. ಇವರ ಚಿಕ್ಕಪ್ಪ ತ.ಸು. ಶಾಮರಾಯರು ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಶಿವರುದ್ರಪ್ಪನವರಿಗೆ ಅಚ್ಚುಮೆಚ್ಚಿನ ಗುರುಗಳಾಗಿದ್ದರು.
ತ.ರಾ.ಸು ವಿದ್ಯಾಭ್ಯಾಸ..
ಇನ್ನು ವೆಂಕಣ್ಣಯ್ಯನವರ ಜೊತೆ ಪಂದ್ಯ ಕಟ್ಟಿ, ಪುಟ್ಟನ ಚೆಂಡು ಎಂಬ ಚೊಚ್ಚಲ ಕಥೆಯನ್ನು ರಚಿಸಿದ ತ.ರಾ.ಸು ತಮ್ಮ 17 ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಚಿತ್ರದುರ್ಗ ಜಿಲ್ಲೆಯ ಬಾಗೂರು ಗ್ರಾಮದಲ್ಲಿ ರಾಷ್ಟ್ರಭಕ್ತಿ ಗೀತೆಗಳನ್ನ ಹಾಡಿ, ಭಾಷಣಗಳನ್ನ ಮಾಡುತ್ತಾರೆ. ಮಗನ ವಿದ್ಯಾಭ್ಯಾಸಕ್ಕೆ ಸ್ವಾತಂತ್ರ್ಯ ಹೋರಾಟವೇ ಮುಳುವಾಗಬಾರದೆಂಬ ಕಾರಣಕ್ಕೆ ತಂದೆ ರಾಮಸ್ವಾಮಯ್ಯನವರು ತ.ರಾ.ಸು ಅವರನ್ನ ಬೆಂಗಳೂರಿನ ನ್ಯಾಷನಲ್ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ತಮ್ಮ 10ನೇ ತರಗತಿಯ ವಿದ್ಯಾಭ್ಯಾಸ ಮುಗಿಸಿದ ತ.ರಾ.ಸು ಬಳಿಕ ಶಿವಮೊಗ್ಗದಲ್ಲಿ ಪಿಯುಸಿ ಮುಗಿಸಿ, ತುಮಕೂರಿನಲ್ಲಿ ಪದವಿ ವ್ಯಾಸಂಗ ಮುಂದುವರಿಸ್ತಾರೆ. ಈ ವೇಳೆ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮಹಾತ್ಮ ಗಾಂಧೀಜಿಯವರನ್ನ ಬಂಧಿಸಿದ ವಿಚಾರ ತಿಳಿದು ತರಗತಿಗಳನ್ನ ಬಹಿಷ್ಕರಿಸಿದ ತ.ರಾ.ಸು ಸ್ನೇಹಿತರೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾಗ್ತಾರೆ.
ತ.ರಾ.ಸು ಅವರ ವೃತ್ತಿ ಬದುಕು..
1942 ರ ಡಿಸೆಂಬರ್ ನಲ್ಲಿ ಜೈಲಿನಿಂದ ಬಿಡುಗಡೆಯಾದ ಬಳಿಕ ಭಾರತಕ್ಕೆ ಸ್ವಾತಂತ್ರ್ಯ ಸಿಗದ ಹೊರೆತು ನನ್ನ ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ ಎಂದು ನಿರ್ಧರಿಸಿ ಪ್ರಖರ ಬರಹಗಾರನಾಗಿ ತಮ್ಮನ್ನ ತೊಡಗಿಸಿಕೊಳ್ಳುತ್ತಾರೆ. ಪತ್ರಕರ್ತನಾಗಿ ವೃತ್ತಿ ಆರಂಭಿಸಿ ವಿಶ್ವಕರ್ನಾಟಕ ಪತ್ರಿಕೆಯ ಉಪಸಂಪಾದಕನಾಗಿ 25 ರೂಪಾಯಿ ಸಂಬಳ ಪಡೆಯುತ್ತಿದ್ದ ತ.ರಾ.ಸು ಅಂಬುಜಾ ಎಂಬಾಕೆಯನ್ನ ವಿವಾಹವಾಗ್ತಾರೆ. ಬಳಿಕ ಪ್ರಜಾಮತ, ವಾಹಿನಿ, ನವೋದಯ, ಸೇರಿದಂತೆ ಪ್ರಜಾವಾಣಿ, ಮೈಸೂರು, ಕಾಲದೂತ ವಿಚಾರವಾಣಿ ಪತ್ರಿಕೆಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಜೊತೆಗೆ ಸಮಾಜದ ಕೆಳಸ್ಥರದ ಜನರ ಬದುಕು- ಬವಣೆ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಗಳನ್ನ ಒಳಗೊಂಡಂತೆ ಹತ್ತಾರು ಲೇಖನಗಳನ್ನ ಬರೆದಿದ್ದಾರೆ. ಕಾಲಕ್ರಮೇಣ ತ.ರಾ.ಸು ಅವರ ವೈಚಾರಿಕತೆಗಳು ಕಾದಂಬರಿಗಳಾಗಿ ಹೊರಹೊಮ್ಮುತ್ತವೆ.
ತ.ರಾ.ಸು ಕಾದಂಬರಿ ಸಾಮ್ರಾಜ್ಯ..
ಪತ್ರಕರ್ತನಾಗಿ, ಪ್ರಖರ ಬರಹಗಾರನಾಗಿ ಸಾಹಿತ್ಯ ಲೋಕದಲ್ಲಿ ಹೊಸ ಛಾಪು ಮೂಡಿಸಿದ ತ.ರಾ.ಸು, ಮಸಣದ ಹೂ, ಮನೆಗೆ ಬಂದ ಮಹಾಲಕ್ಷ್ಮಿ, ನಾಗರ ಹಾವು, ರಕ್ತ ತರ್ಪಣ, ಪುರುಷಾವತಾರ, ಬೇಡದ ಮಗು, ಬಿಡುಗಡೆಯ ಬೇಡಿ, ಚಂದನz Àಗೊಂಬೆ, ಚಕ್ರತೀರ್ಥ, ಸಾಕು ಮಗಳು, ಮಾರ್ಗದರ್ಶಿ, ಬೆಂಕಿಯ ಬಲೆ, ಚಂದ್ರವಳ್ಳಿಯ ತೋಟ, ಎರಡು ಹೆಣ್ಣು ಒಂದು ಗಂಡು, ಗಾಳಿಮಾತು, ಪಂಜರದ ಪಕ್ಷಿ, ಮೊದಲ ನೋಟ, ಬೆಳಕು ತಂದ ಬಾಲಕ, ನಾಲ್ಕು+ನಾಲ್ಕು=ಒಂದು, ಅಕ್ಕಮ್ಮನ ಭಾಗ್ಯ , ಅಗ್ನಿ ರಥ, ಅಪರಾಧಿ, ಆಕಸ್ಮಿಕ , ಹಂಸಗೀತೆ, ತಿರುಗುಬಾಣ, ಸಿಡಿಲಮೊಗ್ಗು, ಕಸ್ತೂರಿ ಕಂಕಣ, ನೃಪತುಂಗ, ಕಂಬನಿಯ ಕುಯಿಲು, ರಕ್ತರಾತ್ರಿ, ತಿರುಗುಬಾಣ ದಂತಹ ಹತ್ತಾರು ಸಾಮಾಜಿಕ-ಪೌರಾಣಿP-ಐತಿಹಾಸಿಕÀ ಕಾದಂಬರಿಗಳನ್ನೂ ರಚಿಸಿದ್ದಾರೆ. ದುರ್ಗಾಸ್ತಮಾನ ಎಂಬ ಐತಿಹಾಸಿಕ ಕಾದಂಬರಿಗೆ 1985ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಹತ್ತಾರು ಸಿನಿಮಾಗಳ ಬಂಡವಾಳವಾಯ್ತು ತ.ರಾ.ಸು ಕಾದಂಬರಿ.


ತ.ರಾ.ಸು ಅವರು ಬರೆದ ಹಲವಾರು ಕಾದಂಬರಿಗಳು ಚಲನಚಿತ್ರಗಳಾಗಿವೆ. ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ತ.ರಾ.ಸು ಅವರ ಕಾದಂಬರಿಗಳನ್ನು ದೃಷ್ಯ ರೂಪದಲ್ಲಿ ನೋಡಬಹುದಾಗಿದೆ. 1964ರಲ್ಲಿ ತೆರೆಕಂಡ ಡಾ. ರಾಜ್ ಅಭಿನಯದ ಚಂದ್ರವಳ್ಳಿಯ ತೋಟ, 1975ರಲ್ಲಿ ತೆರೆಕಂಡ ಹಂಸಗೀತೆ, ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ ನಾಗರ ಹಾವು(1972), ಚಂದನದ ಗೊಂಬೆ(1979), ಮಸಣದ ಹೂ(1984), ಬಿಡುಗಡೆಯ ಬೇಡಿ(1985), ಬೆಂಕಿಯ ಬಲೆ(1983), ಗಾಳಿ ಮಾತು(1981), ಆಕಸ್ಮಿಕ(1993), ಬಸಂತ್ ಬಹರ್(1956, ಹಿಂದಿ), ಝಿಹ್ರೇಲ ಐಸಾನ್(1974, ಹಿಂದಿ), ಕೊಡಿ ನಾಗು( 1974, ತೆಲುಗು) ಸಿನಿ ಪ್ರೇóಕರ ಮನಗೆದ್ದು ಸಿನಿಮಾ ರಂಗವನ್ನೆ ಉನ್ನತ ಶಿಖರವೇರುವಂತೆ ಮಾಡಿದೆ . ಹೀಗೆ ಅದ್ವಿತೀಯ ಸಾಹಿತ್ಯ ಸಾಧನೆ ಮಾಡಿದ ತ.ರಾ.ಸು ಅವರ ಇಡೀ ಜೀವನವೇ ಕನ್ನಡ ಸೇವೆಗೆ ಅರ್ಪಣೆಯಾದಂತಹದ್ದು. ತಮ್ಮ ಲೇಖನಿಯ ಪ್ರಖರ ಮತ್ತು ನಿಖರತೆಯಿಂದ ಕನ್ನಡನಾಡಿಗೆ ಅಕ್ಷರಾರ್ಚನೆಗೈದ ತ.ರಾ.ಸು ಹಿಂದೊಮ್ಮೆ ಬರೆದು ಬದುಕುತ್ತೇನೆ ಎಂದಿದ್ದರಂತೆ, ಅಂತೆಯೇ ಎಂದೋ ಬರೆದ ಕಾದಂಬರಿಗಳ ಮುಖಾಂತರವೇ ಇಂದಿಗೂ ಬದುಕುತ್ತಿದ್ದಾರೆ ತ.ರಾ.ಸು.
-ರುದ್ರೇಶ್ ಪಿ ವಿ
9880791719