ಅಪ್ಪ ಅಂತ ಅಪ್ಪಿಕೊಳ್ಳೋದಕ್ಕೂ ಆಗೋದಿಲ್ಲ ಇದು ಪೊಲೀಸ್ ಮಕ್ಕಳ ಕಣ್ಣೀರು
Report By News Toniq | Bengaluru | Last Updated at April 6 2020
ಬೆಂಗಳೂರು; ಕೊರೋನಾ ವೈರಸ್ ನಿಂದಾಗಿ ದೇಶದಲ್ಲಿ ಅಲ್ಲೋಲಕಲ್ಲೋಲವಾಗಿದೆ. ಆದ್ರೆ ಈ ನಡುವೆ ಜನರ ಸೇವೆಯಲ್ಲಿ ಪೊಲೀಸ್ ಇಲಾಖೆ ಹಗಲಿರುಳು ತೊಡಗಿಸಿಕೊಂಡಿದೆ. ಪೊಲೀಸ್ರು ಲಾಕ್ ಡೌನ್ ಆದಾಗಿನಿಂದಲ್ಲೂ ಜನರ ಸೇವೆಯಲ್ಲಿ ನಿರತರಾಗಿದ್ದಾರೆ.
ಕೇವಲ ರಕ್ಷಣೆ ಮಾತ್ರವಲ್ಲದೆ ಹಸಿದವರಿಗೆ ಅನ್ನ ಕೊಡೋದ್ರಿಂದ ಹಿಡಿದು ಮನೆ ಮನೆಯಲ್ಲಿರೋ ರೋಗಿಗಳನ್ನ ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನ ಮಾಡ್ತಿದ್ದಾರೆ. ಆದ್ರೆ ಪೊಲೀಸ್ರಿಗೆ ಸರಿಯಾದ ಯಾವುದೇ ಸುರಕ್ಷಾ ಕವಚಗಳು ಸಿಗ್ತಿಲ್ಲ. ಮಾಸ್ಕ್ ಒಂದನ್ನ ನಂಬಿಕೊಂಡು ತಮ್ಮ ಕರ್ತವ್ಯ ನಿರ್ವಹಿಸ್ತಿದ್ದಾರೆ.
ಬೆಳಗ್ಗೆಯಿಂದ ರಾತ್ರಿಯವರೆಗೆ ಪೊಲೀಸ್ರು ಜನರು ಕೇಳಿದ ಸಹಾಯಕ್ಕೆ ಹಸ್ತ ಚಾಚುತ್ತಿದ್ದಾರೆ. ಅವರಿಗೆ ಯಾರಿಗೆ ಕೊರೋನಾ ಇದೆ ಯಾರಿಗೆ ಇಲ್ಲ ಅನ್ನೋದು ಗೊತ್ತಿಲ್ಲ. ಆದ್ರು ಕರ್ತವ್ಯವನ್ನ ನಂಬಿ ಕೆಲಸ ಮಾಡ್ತಿದ್ದಾರೆ.
ಹೀಗಾಗಿ ಮನೆಗೆ ಹೋದ ಮೇಲೆ ತಮ್ಮ ಮನೆಯವರೊಂದಿಗೆ ಒಂದೆರೆಡು ನಿಮಿಷ ಸಂತೋಷವಾಗಿ ಕಳೆಯೋದಕ್ಕೆ ಸಾಧ್ಯವಾಗ್ತಿಲ್ಲ. ಮನೆಯಲ್ಲಿ ಚಿಕ್ಕ ಮಕ್ಕಳಿರೋ ಪೊಲೀಸ್ರು ತಮ್ಮ ಮಕ್ಕಳನ್ನ ಮುದ್ದಿಸೋದಕ್ಕೂ ಸಾಧ್ಯವಾಗ್ತಿಲ್ಲ. ಎಲ್ಲಿ ಊರ ಮಾರಿ ಮನೆಯೊಳಗೆ ನುಸುಳುತ್ತೋ ಅಂತ ಆತಂಕದಲ್ಲಿ ಮಡದಿ ಮಕ್ಕಳನ್ನ ದೂರಕ್ಕೆ ಇಟ್ಟಿದ್ದಾರೆ.
ಮಕ್ಕಳೇ ಅಪ್ಪನನ್ನ ಕಂಡು ಅಪ್ಪಿಕೊಳ್ಳೋದಕ್ಕೆ ಹೋದ್ರು ಸಾಧ್ಯವಾಗ್ತಿಲ್ಲ. ಇನ್ನು ಚಿಕ್ಕ ಮಕ್ಕಳನ್ನ ಹೊಂದಿರೋ ಮಹಿಳಾ ಪೊಲೀಸ್ರಿಗೆ ಅತ್ತ ಮಕ್ಕಳನ್ನ ಮಡಿಲಲ್ಲಿ ಮಲಗಿಸಿಕೊಳ್ಳಲು ಆಗದೆ ಇತ್ತ ದೂರ ಇಡಲು ಆಗದೆ ಒದ್ದಾಡ್ತಿದ್ದಾರೆ. ಇಲಾಖೆ ವೈದ್ಯರಿಗೆ ನೀಡೋ ಹಾಗೆ ಸುರಕ್ಷತಾ ಸೂಟ್ ಗಳನ್ನ ಪೊಲೀಸ್ರಿಗೂ ನೀಡಿದ್ರೆ ಇರೋ ಸ್ವಲ್ಪ ಸಮಯದಲ್ಲಿ ಅವ್ರು ಮನೆಯವರೊಂದಿಗೆ ಸಂತೋಷದ ಸಮಯ ಕಳೆಯಬಹುದು.